ಮೌನ
ಮಾತನಾಡುವ ಸಮಯದಲಿ ಮಾತನಾಡುವ ಕಲೆಯು
ಮೌನದಲಿರುವ ಸಮಯ ಬಂದಾಗ ಮೌನಕ್ಕೆ ಬೆಲೆಯು
ಮಾತು, ಮೌನದ ಅರ್ಥ ತಿಳಿದರುವುದು ಒಳ್ಳೆಯದು
ಸಮಯ , ಸಂದರ್ಭಕೆ ತಕ್ಕಂತ ನಡೆಯೆ ಉತ್ತಮವದು.
ಮೌನ
ಬರುವುದೆಲ್ಲವು ಬರಲಿ
ನಡೆ ಮುಂದೆ ಸಹಿಸುತಲಿ
ಬಳಲಿ ಬೆಂಡಾಗದಿರಲಿ
ಮನವೆಂದಿಗೂ ಬಾಡದಿರಲಿ
ದೇವಕರುಣೆಯೊಂದಿರಲಿ
ತಾಳ್ಮೆಯದು ಹೆಚ್ಚಿರಲಿ
ದೇವನಿತ್ತಿಹ ಭಾಗ್ಯ ಕಣ್ಣೆದುರಲಿ
ಮೌನದಲಿ ಶರಣಾಗು ದೇವನಲ್ಲಿ🙏🙏
#ಭಾಗ್ಯೋದಯ
✍🏻ಭಾಗ್ಯಶ್ರೀ ಕೆಕ್ಕಾರ