Posts

೧೭/೦೧/೨೦೨೬ ನೀರಿನ ಜಲಪಾತ

ಜುಳು ಜುಳು ಹರಿಯುವ  ನೀರಿನ ಧ್ವನಿ ಮನದ ಕಲ್ಮಷವ ತೊಳೆಯುವ  ಜನನಿ ನಿನಗೆ ಸಮನಾದ ಸೌಂದರ್ಯ  ಎಲ್ಲಿ?! ಪ್ರಕೃತಿಯಲ್ಲೇ ನಿತ್ಯ ನಲಿವ  ಮಾಲಿನಿ! ಮನಕೆ ಮುದವ ನೀಡುವೆ ನಿಸರ್ಗದ ಕೊಡುಗೆಯೆನುವೆ ಶುಭ್ರ ಜಲದಲಿ ಶೋಭಿಸುವೆ ನಿನಗಿಲ್ಯಾರು ಸಾಟಿಯೆನುವೆ?! ಜುಳು ಜುಳು ಹರಿಯುವ  ನೀರು ಅದರೊಳಗೆ ಆಟವಾಡುತ  ಜಾರು ಖುಷಿಯ ಕ್ಷಣಗಳಲಿ ಕಳೆದಿಹ  ಬಾಲ್ಯ ಮನದಲಿ ಹಸಿರಾದ ಅಂದಿನ  ಮೌಲ್ಯ ಚಿತ್ತ ಚಿತ್ತಾರ 

ಚಿತ್ತ ಚಿತ್ತಾರ ದಿಲ್ಲಿ ಬರೆದಿದ್ದು

ನಿಸರ್ಗದ ಮಡಿಲಿಗೆ ಬಣ್ಣ  ಬಳಿದವರಿಲ್ಲ?! ರಂಗಿನೋಕುಳಿಯ ರಂಗು  ಮುಂಜಾವಿಗಿದೆಯಲ್ಲ ! ಮಾನವರ ಯಾವುದೇ ಕೈಚಳಕ  ಇಲ್ಲಿ ಕಾಣುವುದಿಲ್ಲ  ದೇವಕರುಣೆಯದು ಪ್ರಕೃತಿದೇವಿಯ  ಚಿತ್ತಾರದಲ್ಲಿದೆಯಲ್ಲ ! ರಂಗಿನೋಕುಳಿಯಲಿ ರಂಗು ಚೆಲ್ಲುತ ಬಂದ ಮೂಡಣದಿ ಮೇಲೆದ್ದು ಮೆಲ್ಲನೆ ಬಂದ ಪಕ್ಷಿಗಳ ಕಲರವ ಕೇಳಲು ಸಂತಸವು  ಬೆಳ್ಳನೆಯ ಬೆಳಕು ಹರಿದು ಬಂದವು

ಮೌನ

ಮಾತನಾಡುವ ಸಮಯದಲಿ ಮಾತನಾಡುವ ಕಲೆಯು ಮೌನದಲಿರುವ ಸಮಯ ಬಂದಾಗ ಮೌನಕ್ಕೆ ಬೆಲೆಯು ಮಾತು, ಮೌನದ ಅರ್ಥ ತಿಳಿದರುವುದು ಒಳ್ಳೆಯದು  ಸಮಯ , ಸಂದರ್ಭಕೆ ತಕ್ಕಂತ ನಡೆಯೆ ಉತ್ತಮವದು. ಮೌನ  ಬರುವುದೆಲ್ಲವು ಬರಲಿ  ನಡೆ ಮುಂದೆ ಸಹಿಸುತಲಿ ಬಳಲಿ ಬೆಂಡಾಗದಿರಲಿ  ಮನವೆಂದಿಗೂ ಬಾಡದಿರಲಿ ದೇವಕರುಣೆಯೊಂದಿರಲಿ ತಾಳ್ಮೆಯದು ಹೆಚ್ಚಿರಲಿ  ದೇವನಿತ್ತಿಹ ಭಾಗ್ಯ ಕಣ್ಣೆದುರಲಿ ಮೌನದಲಿ ಶರಣಾಗು ದೇವನಲ್ಲಿ🙏🙏 #ಭಾಗ್ಯೋದಯ ✍🏻ಭಾಗ್ಯಶ್ರೀ ಕೆಕ್ಕಾರ

ನಗು ನಗುತಲಿರು ಮಲ್ಲಿಗೆಯಂತೆ

ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮುಂಜಾನೆ ಮಲ್ಲಿಗೆಯು ಅರಳಿ ನಗುವಂತೆ ಅರಿವಿರದೆ ಪರಿಮಳವ ಹರಡಿ ಬಿಡುವಂತೆ ಯಾವುದಕೂ ಬೀಗದೆ ಬಾಗುವುದು ಒಳಿತಂತೆ ! ಅಹಂಕಾರವದು ಬಳಿಯಲೂ ಸುಳಿಯದಂತೆ  ಸಮಯ, ಸಂದರ್ಭಕೆ ನಡೆವುದು ದೇವನಿರ್ಣಯದಂತೆ ! #ಭಾಗ್ಯೋದಯ

ಜಲಪಾತ

ನೊರೆ ಹಾಲಿನಂತೆ ಹರಿಯುವ ಜಲಧಾರೆ ಕಣ್ಮನ ಸೆಳೆಯುತಿದೆ ನೋಡೋಣ ಬಾರೆ ತುಸು ಹೊತ್ತು ನಿಂತು ಭೊರ್ಗರೆತ ನೋಡಿ ಮನದಿರಲೆಂದೆಂದೂ  ಸಂತಸದ ಮೋಡಿ ! ಕಾಡು ಮಲ್ಲಿಗೆಯು ಅರಳಿ ನಿಲ್ಲುವಂತೆ  ನಿಸರ್ಗದಿ ನೊರೆ ಹಾಲಿನ ಸಂಭ್ರಮವಂತೆ ಮಲ್ಲಿಗೆಯ ಕೊಯ್ಯದಿದ್ದರೂ ಅರಳುವಂತೆ  ಜಲಪಾತದ ವೀಕ್ಷಣೆಯು ಮನದಿ ಹಸಿರಂತೆ ! ಮನದಿ ಮೂಡಲು ಬರೆವೆನು ಚುಟುಕು  ಮುಂಜಾನೆ ಹೀರಿದೆನು ಚಹದ ಗುಟುಕು ಇದೀಗ ಮನೆಗೆಲಸದಲಿ ತುಂಬಿದ ಹುರುಪು ಅಕ್ಷರಗಳ ಕೂಡಿಸಲು ಸುಂದರ ಹೊಳಪು ! ಭಾಗ್ಯಶ್ರೀ ಕೆಕ್ಕಾರ

ಕವಿ ಸಮಯ

#ಕವಿ ಸಮಯ -೧೭ *************** ವಿಷಯ -ಪಯಣ ಕವನ  #ಬಾಳ ಪಯಣ ********************* ಬದುಕಿನ ಪಯಣ ಮೆಲ್ಲನೆ ಸಾಗಲಿ ಅವಸರವಿರದೆ ಮುಂದಕೆ ನಡೆಯಲಿ  ಹಿಂದಿನ ಪಯಣದ ಅನುಭವವಿರಲಿ ನಾಳೆಯ ಪಯಣಕೆಂದೂ ಸಜ್ಜಾಗಿರಲಿ ಪಯಣದ ಹಾದಿಯು ಹೇಗೆ ಇರಲಿ  ಧೈರ್ಯದಲೆ  ಎದುರಿಸಿ ನಡೆಯಲಿ  ಕಳೆದ ದಿನಗಳ ಸ್ಮರಣೆಯದು ಪಾಠ ಮುಂದಿನ ಬಾಳಿಗದು ಬೆಳಕಾಗಿರಲಿ ನೋವು -ನಲಿವು ಎಲ್ಲವೂ ಇಲ್ಲಿಹುದು ಜೀವನದಲೆಲ್ಲರ ಜೊತೆಗೂಡಿ ಸಾಗಲು  ನಗು ನಗುತಲೆ ಮುಂದೆ ಸಾಗುತಲಿರಲು ಬಾಳಿನ ದಾರಿಯು ಸರಳ, ಸುಲಭವು ಹರಿಯುವ ನೀರಿನಂತೆ ಜೀವನ ಪಯಣ ಅಡೆತಡೆಗಳ ದಾಟಿ ಮುನ್ನಡೆಯೋಣ  ! ಬದುಕಿನ ಸಿಹಿ -ಕಹಿ , ಸಂತಸ -ಸಂಕಷ್ಟವ ಅನುಭವಿಸಿ ಬಾಳಿನ ಬಂಡಿ ಎಳೆಯೋಣ. ✍🏻ಭಾಗ್ಯಶ್ರೀ ಕೆಕ್ಕಾರ      ೧೪/೦೨/೨೦೨೫

ಕವಿ ಸಮಯ

#ಕವಿಸಮಯ- ೧೭ *********** ವಿಷಯ - ಪಯಣ ************* #ನವ್ಯಕಾವ್ಯ  #ನಿತ್ಯ ನಿರಂತರ ಪಯಣ  ********************* ಯಾರಿರಲಿ ಇಲ್ಲದಿರಲಿ ಅನುದಿನ  ಸಾಗುವ  ಬದುಕಿನ ಪಯಣ  ಬಾಳಿನ ಬವಣೆ  ಸುಖ -ದುಃಖ , ಕಷ್ಟ- ನಷ್ಟ  ಎಲ್ಲವೂ ಇರುವ ನಿಲ್ದಾಣ ಯಾವುದಕೂ ಕೊರಗದೆ ಮರುಗದೆ  ಮುನ್ನಡೆವ ಬಾಳುವೆಯೆ ಸುಂದರವು ಇರುವುದನು ಪ್ರತಿದಿನ ನೆನೆಯುತ ಇಲ್ಲದಿರುವುದಕೆ  ಕೊರಗದ ಮನ ಚೆಂದವು ಯಾರಿರಲಿ ಇಲ್ಲದಿರಲಿ ಬದುಕು ನಡೆವುದೆಂತು  ಸತ್ಯವು  ಈ ಸುಂದರ ಜಗದಲಿ ಮೆರೆಯುತಿದೆ ಅತಿ ಹೆಚ್ಚೆಚ್ಚು ಮಿಥ್ಯವು ಬಾಳ ಪಯಣದಲಿ ಸಾಗುತಿರೆ ದಾರಿಯಲಿ  ಜೊತೆಯಾಗುವರು ಅನೇಕರು ಕೆಲವರು ಮನದ ಮೂಲೆಯಲಿ ನೆನಪ ಸದಾ ಇರಿಸಿಯೇ ನಡೆವರು  ಮತ್ತೆ ಹಲವರು ಬಾಳ ಪಯಣದಲಿ ಅನೇಕ ತರದ ಪಾಠ ಕಲಿಸಿಯೇ  ಬಿಡುವರು ಇನ್ನೂ ಕೆಲವರು ಸಾಗುವ ದಾರಿಯಲಿ ಭಾವನೆಯಿಂದ ಮನದಾಳದಿ ನೆಲೆಯ ಪಡೆವರು ಬದುಕು ಬರೆದಿಟ್ಟಂತೆ ಸಾಗಲಾರದೆನ್ನುವ  ಅರಿವೊಂದು  ಇರಲಿ ಕಣ್ಣಿಗೆ  ಕಾಣದಿರುವ ಅವನ  ಎಣಿಕೆಯಂತೆ ಜೀವನ ಯಾತ್ರೆಯೆನ್ನುವ ಸತ್ಯ ತಿಳಿದಿರಲಿ. ಭಾಗ್ಯಶ್ರೀ ಕೆಕ್ಕಾರ ೧೪/೦೨/೨೦೨೫