ಚಿತ್ತ ಚಿತ್ತಾರ ದಿಲ್ಲಿ ಬರೆದಿದ್ದು
ನಿಸರ್ಗದ ಮಡಿಲಿಗೆ ಬಣ್ಣ
ಬಳಿದವರಿಲ್ಲ?!
ರಂಗಿನೋಕುಳಿಯ ರಂಗು
ಮುಂಜಾವಿಗಿದೆಯಲ್ಲ !
ಮಾನವರ ಯಾವುದೇ ಕೈಚಳಕ
ಇಲ್ಲಿ ಕಾಣುವುದಿಲ್ಲ
ದೇವಕರುಣೆಯದು ಪ್ರಕೃತಿದೇವಿಯ
ಚಿತ್ತಾರದಲ್ಲಿದೆಯಲ್ಲ !
ರಂಗಿನೋಕುಳಿಯಲಿ ರಂಗು ಚೆಲ್ಲುತ ಬಂದ
ಮೂಡಣದಿ ಮೇಲೆದ್ದು ಮೆಲ್ಲನೆ ಬಂದ
ಪಕ್ಷಿಗಳ ಕಲರವ ಕೇಳಲು ಸಂತಸವು
ಬೆಳ್ಳನೆಯ ಬೆಳಕು ಹರಿದು ಬಂದವು