ಜಲಪಾತ
ನೊರೆ ಹಾಲಿನಂತೆ ಹರಿಯುವ ಜಲಧಾರೆ
ಕಣ್ಮನ ಸೆಳೆಯುತಿದೆ ನೋಡೋಣ ಬಾರೆ
ತುಸು ಹೊತ್ತು ನಿಂತು ಭೊರ್ಗರೆತ ನೋಡಿ
ಮನದಿರಲೆಂದೆಂದೂ ಸಂತಸದ ಮೋಡಿ !
ಕಾಡು ಮಲ್ಲಿಗೆಯು ಅರಳಿ ನಿಲ್ಲುವಂತೆ
ನಿಸರ್ಗದಿ ನೊರೆ ಹಾಲಿನ ಸಂಭ್ರಮವಂತೆ
ಮಲ್ಲಿಗೆಯ ಕೊಯ್ಯದಿದ್ದರೂ ಅರಳುವಂತೆ
ಜಲಪಾತದ ವೀಕ್ಷಣೆಯು ಮನದಿ ಹಸಿರಂತೆ !
ಮನದಿ ಮೂಡಲು ಬರೆವೆನು ಚುಟುಕು
ಮುಂಜಾನೆ ಹೀರಿದೆನು ಚಹದ ಗುಟುಕು
ಇದೀಗ ಮನೆಗೆಲಸದಲಿ ತುಂಬಿದ ಹುರುಪು
ಅಕ್ಷರಗಳ ಕೂಡಿಸಲು ಸುಂದರ ಹೊಳಪು !
ಭಾಗ್ಯಶ್ರೀ ಕೆಕ್ಕಾರ