ಕವಿ ಸಮಯ
#ಕವಿಸಮಯ- ೧೭
***********
ವಿಷಯ - ಪಯಣ
*************
#ನವ್ಯಕಾವ್ಯ
#ನಿತ್ಯ ನಿರಂತರ ಪಯಣ
*********************
ಯಾರಿರಲಿ ಇಲ್ಲದಿರಲಿ ಅನುದಿನ ಸಾಗುವ
ಬದುಕಿನ ಪಯಣ
ಬಾಳಿನ ಬವಣೆ ಸುಖ -ದುಃಖ , ಕಷ್ಟ- ನಷ್ಟ
ಎಲ್ಲವೂ ಇರುವ ನಿಲ್ದಾಣ
ಯಾವುದಕೂ ಕೊರಗದೆ ಮರುಗದೆ ಮುನ್ನಡೆವ
ಬಾಳುವೆಯೆ ಸುಂದರವು
ಇರುವುದನು ಪ್ರತಿದಿನ ನೆನೆಯುತ ಇಲ್ಲದಿರುವುದಕೆ
ಕೊರಗದ ಮನ ಚೆಂದವು
ಯಾರಿರಲಿ ಇಲ್ಲದಿರಲಿ ಬದುಕು ನಡೆವುದೆಂತು
ಸತ್ಯವು
ಈ ಸುಂದರ ಜಗದಲಿ ಮೆರೆಯುತಿದೆ ಅತಿ
ಹೆಚ್ಚೆಚ್ಚು ಮಿಥ್ಯವು
ಬಾಳ ಪಯಣದಲಿ ಸಾಗುತಿರೆ ದಾರಿಯಲಿ
ಜೊತೆಯಾಗುವರು ಅನೇಕರು
ಕೆಲವರು ಮನದ ಮೂಲೆಯಲಿ ನೆನಪ ಸದಾ
ಇರಿಸಿಯೇ ನಡೆವರು
ಮತ್ತೆ ಹಲವರು ಬಾಳ ಪಯಣದಲಿ ಅನೇಕ ತರದ
ಪಾಠ ಕಲಿಸಿಯೇ ಬಿಡುವರು
ಇನ್ನೂ ಕೆಲವರು ಸಾಗುವ ದಾರಿಯಲಿ ಭಾವನೆಯಿಂದ ಮನದಾಳದಿ ನೆಲೆಯ ಪಡೆವರು
ಬದುಕು ಬರೆದಿಟ್ಟಂತೆ ಸಾಗಲಾರದೆನ್ನುವ
ಅರಿವೊಂದು ಇರಲಿ
ಕಣ್ಣಿಗೆ ಕಾಣದಿರುವ ಅವನ ಎಣಿಕೆಯಂತೆ ಜೀವನ ಯಾತ್ರೆಯೆನ್ನುವ ಸತ್ಯ ತಿಳಿದಿರಲಿ.
ಭಾಗ್ಯಶ್ರೀ ಕೆಕ್ಕಾರ
೧೪/೦೨/೨೦೨೫