ಕವಿ ಸಮಯ

#ಕವಿ ಸಮಯ -೧೭
***************
ವಿಷಯ -ಪಯಣ

ಕವನ
 #ಬಾಳ ಪಯಣ
*********************
ಬದುಕಿನ ಪಯಣ ಮೆಲ್ಲನೆ ಸಾಗಲಿ
ಅವಸರವಿರದೆ ಮುಂದಕೆ ನಡೆಯಲಿ 
ಹಿಂದಿನ ಪಯಣದ ಅನುಭವವಿರಲಿ
ನಾಳೆಯ ಪಯಣಕೆಂದೂ ಸಜ್ಜಾಗಿರಲಿ

ಪಯಣದ ಹಾದಿಯು ಹೇಗೆ ಇರಲಿ 
ಧೈರ್ಯದಲೆ  ಎದುರಿಸಿ ನಡೆಯಲಿ 
ಕಳೆದ ದಿನಗಳ ಸ್ಮರಣೆಯದು ಪಾಠ
ಮುಂದಿನ ಬಾಳಿಗದು ಬೆಳಕಾಗಿರಲಿ

ನೋವು -ನಲಿವು ಎಲ್ಲವೂ ಇಲ್ಲಿಹುದು
ಜೀವನದಲೆಲ್ಲರ ಜೊತೆಗೂಡಿ ಸಾಗಲು 
ನಗು ನಗುತಲೆ ಮುಂದೆ ಸಾಗುತಲಿರಲು
ಬಾಳಿನ ದಾರಿಯು ಸರಳ, ಸುಲಭವು

ಹರಿಯುವ ನೀರಿನಂತೆ ಜೀವನ ಪಯಣ
ಅಡೆತಡೆಗಳ ದಾಟಿ ಮುನ್ನಡೆಯೋಣ  !
ಬದುಕಿನ ಸಿಹಿ -ಕಹಿ , ಸಂತಸ -ಸಂಕಷ್ಟವ
ಅನುಭವಿಸಿ ಬಾಳಿನ ಬಂಡಿ ಎಳೆಯೋಣ.

✍🏻ಭಾಗ್ಯಶ್ರೀ ಕೆಕ್ಕಾರ 
    ೧೪/೦೨/೨೦೨೫

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)