ಚುನಾವಣೆ

*ಚುನಾವಣೆ* 

ಚುನಾವಣೆಯ ಕಾವು ಏರುತಿದೆ ಜೋರಾಗಿ 

ಬಿಗಿವ ಭಾಷಣಗಳಲಿ ತುಂಬು  ಆಶ್ವಾಸನೆ 

ಹೋದಲ್ಲಿ ಬಂದಲ್ಲಿ ಕೇಳುವರು ಮತವನ್ನ 

ನೀಡುತಿರುವರು ಸೀರೆ ,ಪಂಚೆಗಳನು

ಇನ್ನೂ ಕೆಲ ನಾಯಕರು ನೀಡುವರು ಧನವನ್ನ

ಗೆದ್ದು ಬಂದರೆ ಸಿಗುವರು ಐದು ವರುಷದ ತನಕ 

 ಸೋತರೆ ಒಮ್ಮೆಯೂ ಹಿಂತಿರುಗಿ ನೋಡಲಾರರು ..

ಭಾಗ್ಯಶ್ರೀ ಕೆಕ್ಕಾರ

(ಭಾಗೀ ಹೆಗಡೆ  ಕಲ್ಲಳ್ಳಿ)
 FB ಯಲ್ಲಿ ಬರೆದಿದ್ದು .ಹಳೇದು

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)