ಅಜ್ನಮನಿಗೋಪನ ( ಹವ್ಯಕ ಸೊಗಡು)
ಅಜ್ನಮನಿಗೊಪನ
ಯಂಗವೆಲ್ಲ ಹುಟ್ಟಿದ್ದು ಅಜ್ನಮನೇಲಿ
ಯಂಗ್ಳ ಹುಕ್ಳು ಹುಗದಿದ್ದು
ಯಂಗ್ಳ ಯಂಗ್ಳ ಅಜ್ನಮನೇಲೆಯಾ
ಅದ್ಕಾಗಿ ಯಾವಾಗ ನೋಡ್ರು ಅಜ್ನ ಮನೆಗೆ ಹೋಗ್ತ್ಯ.
ಈಗೀನ ಹುಡ್ರು ಹಾಂಗಿಲ್ಲೆ
ದವಾಖಾನೆಲೆ ಹುಟ್ತ, ಅದ್ಕೇ ಆವಾಗಾವಾಗ
ದವಾಖಾನೆಗೆ ಹೋಗ್ತಿರ್ತ.
ಅಜ್ನ ಮನೆ ದಾರಿನೆ ಗೊತ್ತಿರ್ತಿಲ್ಲೆ.
ಸುಮ್ಮನೆ ಗೀಚಿದೆ
ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ)