ಜೇಡರ ಬಲೆ

ಜೇಡರ ಬಲೆ
ಮಾಲೆಯನು ಮಾಡಿಹುದು
ಚಂದದಲಿ ನೋಡಿ
ಮಾಲೆಯನು  ಕಟ್ಟುವ 
 ಕಸುಬ ಕಲಿತಿಹುದು ನೋಡಿ
ದಿನದಿನವು ಕಟ್ಟುವದದು  ಮಾಲೆಯಾ
ತನಗೆ ಮಾಲೆ ಕಟ್ಟುವ ಕಸುಬು
 ದೇವನಿತ್ತ  ವರವಹುದು ನೋಡಿ
ಪ್ರತಿನಿತ್ಯ  ಮಾಲೆ  ತೆಗೆದರೂ  ಮತ್ತೆ 
 ಕಟ್ಟುವುದು  ಹೊಸ ಹುರುಪಿನಿಂದ 
ಮಾನವಗೆ ತಿಳಿದಿಲ್ಲ ಈ ತರದ ಕಸುಬು
 ಇದು ತನ್ನ ಕಾಯಕವು ಕಟ್ಟುವುದ 
ಬಿಡಲಾರೆ  ಎಂದೆನುತ  ಮತ್ತೆ
ಮಾಲೆ ಕಟ್ಟುತಲಿಹುದು ನೋಡಿ.


ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
( ಮನೆಯಲ್ಲಿ ಜೇಡರ ಬಲೆ ತೆಗೆವ ಸಮಯದಲಿ ಅನಿಸಿದ ಭಾವ..)

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)