ರವಿ ಮೂಡಿದ
ರವಿ ಮೇಲೇರಿ ಬಂದ
ಭುವಿಗೆ ಬೆಳಕನು ತಂದ
ಬೆಳಕಿನಾ ಕಿರಣಗಳ ಅಂದ
ನೋಡಲದು ಕಣ್ಣಿಗಾನಂದ
ಪಕ್ಷಿಗಳ ಚಿಲಿಪಿಲಿಯ ಸದ್ದು
ಕೇಳಲದು ಮನಕೆ ಮುದವು
ರವಿಯ ಉದಯವು ಕಣ್ಮನವ
ಸೆಳೆದು ಮನಕಾನಂದ ನೀಡುವುದು
ದಿನ ದಿನವು ಪ್ರತಿದಿನವು.
ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೧೮/೧೨/೨೧