ಸಂಕ್ರಾಂತಿ
*ಸಂಕ್ರಾಂತಿ*
ಸುಗ್ಗಿಯ ಹಬ್ಬವು ಬಂದಿತಿದೊ
ಹಿಗ್ಗಿನ ಬುಗ್ಗೆಯ ತಂದಿತಿದೊ
ಜಗ್ಗದೆ ಕುಗ್ಗದೆ ಕುಣಿಯಿಸಿತು
ರಗ್ಗಿನ ಛಳಿಯನು ಓಡಿಸಿತು
ವರುಷವು ಮುಗಿಯಿತೆ ಹಿಗ್ಗಿನಲಿ
ತರುಗಳು ಚಿಗುರಿತೆ ಮೊಗ್ಗಿನಲಿ
ಬರುತಲಿ ಸಡಗರ ಬಾಳಿನಲಿ
ಬಿರಿಯಲಿ ನಗುವದು ತುಟಿಗಳಲಿ
ಗದ್ದೆಯು ತುಂಬಿದೆ ಬೆಳೆ ಬೆಳೆದು
ಬಿದ್ದಿದೆ ಹಕ್ಕಿಯ ಕರಿನೆರಳು
ನಿದ್ದೆಯು ಬಾರದು ಹಗಲಿರುಳು
ಕದ್ದರೆ ಕಳ್ಳರು ಬಳಿಸುಳಿದು
ಕೊಯ್ಲದು ಮುಗಿಯಿತೆ ಫಸಲಿನದು
ಕೈಲದು ಬಂದಿತೆ ಕಾಸಿನದು
ಚೀಲವು ತುಂಬಿತೆ ಮನಸಿನದು
ಕಾಲವು ಮೊರೆಯಿತೆ ಸಂಭ್ರಮದಿ
ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೧೦/೧/೨೨