ಸಿಹಿ ಸಿಹಿ ನೆನಪು

ದಂಟು ದಂಟು ಕಬ್ಬಿನ ದಂಟು
ನೋಡಲು ಅದುವು ಅಂಕು ಡೊಂಕು ಉಂಟು
ಬಣ್ಣವು ಅದರದು  ಕಪ್ಪಗೆ ಉಂಟು
ಹೀರಲು ರಸದಲಿ  ಡೊಂಕುಂಟೇನು ??
ಅದರ ರಸವು ಸಿಹಿ ಸಿಹಿ ಉಂಟು
ರೈತರ ಶ್ರಮವು ಇದರಲಿ ಉಂಟು
ರಸವ ಹೀರಲು ಹಿತವದು ಉಂಟು
ಬಾಲ್ಯದ ನೆನಪು ಹಸಿರಾಗಿ ಉಂಟು
ಮರಳಿ ಬಾಲ್ಯವ ಪಡೆಯಲುಂಟೇನು!!?
ಆಲೆಮನೆ ನೆನಪು ಹಚ್ಚ ಹಸಿರಾಗಿ ಉಂಟು
ಕಬ್ಬಿನ ಗದ್ದೆಯು ನೆನಪಲಿ ಉಂಟು
ಸುಗ್ಗಿಯ ಹಬ್ಬವು ಮನದಲಿ ಉಂಟು 
ಪ್ರಕೃತಿಯ ಕೊಡುಗೆ ಇದರಲಿ ಉಂಟು
ಯಾರಿಂದಲೂ ಅದು ಕದಿಯಲಾಗದ ಗಂಟು
ಭಾಗ್ಯಶ್ರೀ ಕೆಕ್ಕಾರ
ಭಾಗೀ ಹೆಗಡೆ ಕಲ್ಲಳ್ಳಿ
೨೩/೧/೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)