🌺ವೀರ ಸುಭಾಷ್ 🌺
🌺ಸಾಹಿತ್ಯ ಸಂಚಲನ ಶಿರಸಿ🌺
ವಾರದ ಸಾಹಿತ್ಯ ಚಟುವಟಿಕೆ -೨೯
ದಿನಾಂಕ: ೨೪/೦೧/೨೦೨೨ ಸೋಮವಾರ
ಸಮಯ: ಸಂಜೆ ೬ ರಿಂದ ೧೦ ಗಂಟೆಯವರೆಗೆ
ಸಾಹಿತ್ಯ ಪ್ರಕಾರ:ಕವನ
ವಿಷಯ: ನೇತಾಜಿ ಸುಭಾಷ್ ಚಂದ್ರ ಬೋಸ್
ಶೀರ್ಷಿಕೆ : 💐 ವೀರ ಸುಭಾಷ್ 💐
ಚಂದ್ರರು ಚಂದ್ರರು ಸುಭಾಷ್ ಚಂದ್ರರು
ಒರಿಸ್ಸಾದ ಕಟಕ್ ನಲ್ಲಿ ಜನಿಸಿದ ಮಹಾತ್ಮರು
ಸ್ವಾತಂತ್ರ್ಯಕ್ಕಾಗಿ ಸದಾ ಹೋರಾಡಿದ ವೀರರು
ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದರು
ದೇಶ-ವಿದೇಶಗಳಲಿ ಸಂಚರಿಸಿದ ವೀರರು
ದೇಶಕಾಗಿ ಬದುಕನ್ನ ಮುಡಿಪಿಟ್ಟ ಧೀರರು
ನಾನಾ ಭಾಷೆಗಳನು ಕಲಿತ ಇವರು ವೀರರು
ರಕ್ತವನ್ನು ನೀಡಿ, ಸ್ವಾತಂತ್ರ್ಯ ನೀಡುವೆ ಎಂದ ಶೂರರು
ಭಾರತದ ಹೆಮ್ಮೆಯ ಪುತ್ರರಿವರು
ಕೋಟಿ ಕೋಟಿ ಜನರಿಗೆ ಸ್ಪೂರ್ತಿಯಾದರು
ಆಂಗ್ಲರಿಂದ ಮುಕ್ತವಾಗಲೆಂದು ಶ್ರಮವ ಪಟ್ಟರು
ಅನ್ಯಾಯ, ತಪ್ಪುಗಳನು ಒಪ್ಪದಿರುವರು
ಭಾರತ ದೇಶದ ವೀರ,ಶೂರರಿವರು
ದೇಶಕಂಡ ಅಪ್ರತಿಮ ನಾಯಕರಿವರು
ನೇತಾಜಿ ಎಂಬ ನಾಮದಿಂದ ಎಲ್ಲ ಕರೆವರು ಭಾರತೀಯರಲ್ಲಿ ಇವರು ಅಮರರಾದರು.
ಭಾಗ್ಯಶ್ರೀ ಕೆಕ್ಕಾರ
೨೪/೦೧/೨೦೨೨