ಗಣರಾಜ್ಯೋತ್ಸವದ ಹಬ್ಬ

🌺ಸಾಹಿತ್ಯ ಸಂಚಲನ ಶಿರಸಿ🌺
 ವಾರದ ಸಾಹಿತ್ಯ ಚಟುವಟಿಕೆ -೩೦
 ೨೬/೧/೨೨
ಸಾಹಿತ್ಯ ಪ್ರಕಾರ : ಕವನ ರಚನೆ 
ವಿಷಯ: ಗಣರಾಜ್ಯೋತ್ಸವ 🙏🙏

 ಶೀರ್ಷಿಕೆ : 💐💐ಗಣರಾಜ್ಯೋತ್ಸವ ಹಬ್ಬ 💐💐


ಬಂತು ಬಂತು ಹಬ್ಬ ಇಪ್ಪತ್ತಾರರ ಹಬ್ಬ
ತ್ರಿವರ್ಣ ಧ್ವಜದಿಂದ ಶೋಭಿಸುವ ಹಬ್ಬ
ಕೇಸರಿ ,ಬಿಳಿ ,ಹಸಿರು ಬಾವುಟದ ಹಬ್ಬ
        ಗಣರಾಜ್ಯೋತ್ಸವ ಹಬ್ಬ

ದೇಶದಲಿ ೨೦೨೨ ರ ವರುಷದ ಮೊದಲ ಹಬ್ಬ
ದೇಶದ ಜನರೆಲ್ಲ ಸಂಭ್ರಮ ಪಡುವ ಹಬ್ಬ
ದೇಶದಲಿ ಜನ್ಮವೆತ್ತ ಮಹನೀಯರ  ಹಬ್ಬ
ದೇಶಕಾಗಿ ಬಲಿತ್ತೆತ್ತವರ  ಸ್ಮರಿಸುವ  ಹಬ್ಬ

ಶಾಲೆಗಳಲಿ ಸಂಭ್ರಮದಿಂದ ನಲಿದಾಡಿದ ದಿನವು
ಬಾಲ್ಯದ ನೆನಪು ಹಸಿರಾದ  ೨೬ ರ ದಿನವು  
ಬೀಗಿಬೀಗಿ ಭಾಷಣ  ಬಿಗಿದಾ ಗಣರಾಜ್ಯದ ದಿನವು 
ಭಾರತೀಯರೆಂದು  ನಾವು ಹೆಮ್ಮೆ ಪಡುವ ದಿನವು

ಜಾತಿ ಮತ ಬೇಧವನ್ನು  ಮರೆತು  ಮುನ್ನಡೆವಾ
ವಿವಿಧತೆಯಲಿ ಏಕತೆಯೆಂಬ  ತತ್ವ ಸಾರುವಾ
ಕರ್ತವ್ಯ ಪ್ರಜ್ಞೆಯಲಿ  ನಾವು ಮುಂದೆ ಸಾಗುವಾ
ಭ್ರಷ್ಟಾಚಾರ ಸ್ವಾರ್ಥವನ್ನ ಸುಟ್ಟು ಹಾಕುವಾ 

 ಸರ್ವರೂ ಒಟ್ಟಾಗಿ  ಬಾವುಟ ಏರಿಸುವಾ
 ಭಕ್ತಿಯಿಂದ ಎಲ್ಲರೂ ಸೇರಿ ರಾಷ್ಟ್ರಗೀತೆ ಹೇಳುವಾ 
 ಸಿಹಿಯನ್ನು ಹಂಚಿ ನಾವು ಮುಂದೆ ಸಾಗುವಾ
  ಒಬ್ಬರಿಗೊಬ್ಬರು ಪರಸ್ಪರ ಶುಭವ ಕೋರುವಾ

ಭಾಗ್ಯಶ್ರೀ ಕೆಕ್ಕಾರ
೨೬/೧/೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)