ಮಲ್ಲಿಗೆ ಬಳ್ಳಿ
ಬೆಳ್ಳಿ ಬಳ್ಳಿ ಬಳ್ಳಿ
ಅಂಕು ಡೊಂಕಿನ ಬಳ್ಳಿ
ಅಡ್ಡ ದಿಡ್ಡದ ಬಳ್ಳಿ
ಆಸರೆ ಕೇಳುವ ಬಳ್ಳಿ
ನೆಟ್ಟಗೆ ಸಾಗದ ಬಳ್ಳಿ
ಸದಾ ಬಳುಕುವ ಬಳ್ಳಿ
ಗೂಟವ ಕೊಡುವ ಬಳ್ಳಿ
ಗೊಂಚಲು ಹೂವಿನ ಬಳ್ಳಿ
ಹನಿ ನೀರು ಗೊಬ್ಬರ ,ಹದದ ಮಣ್ಣು
ರವಿಯ ಕಿರಣ ಬೀಳುತಲಿರಲು
ಹಿತವಾದ ಆರೈಕೆ ಸತತವು ಇರಲು
ಸುಮವು ಬರುವುದು ಗೊಂಚಲಲಿ
ಅರಳಿದ ಹೂವು ,ಘಮವ ಹರಡಿ
ಹೂಗಳ ಕಡೆಗೆ ಗಮನ ಸೆಳೆದು
ಸುಮವ ಬಿಡಿಸಿ ,ಬುಟ್ಟಿಯ ತುಂಬಿಸಿ
ಮಾಲೆಯ ಕಟ್ಟಿ ದೇವಗೆ ಏರಿಸಿ
ಭಕುತಿಯಿಂದ ಕರವ ಜೋಡಿಸಿ
ಪ್ರತಿದಿನವು ನಮಿಸಿ ,ಗಾನವ ಪಾಡುತ
ಶಾಂತಿ ನೆಮ್ಮದಿ ಕರುಣಿಸು ಮನದಿ
ಸೆರಗೊಡ್ಡಿ ಬೇಡುವೆನು ನಿತ್ಯವು🙏🙏
ಭಾಗ್ಯಶ್ರೀ ಕೆಕ್ಕಾರ
೨೭/೧/೨೨