ಮರೆಯಲಾರದ ಮಾಣಿಕ್ಯ

ದೀರ್ಘ ಕಾಲ ಬಾಳಲಿಲ್ಲ
ನಾಲ್ಕು ದಿನದ  ಬದುಕಿನಲ್ಲಿ  
ಮನದಿ ಮನವ ಗೆದ್ದೆಯಲ್ಲ
ಹೆಸರು ಗಳಿಸಿ ನಡೆದೆಯಲ್ಲ


ಮಲ್ಲಿಗೆ ತೆರದಿ ಅರಳಿ ನಿಂದು
ಮಂದಹಾಸ ಬೀರಿ  ನಿಂತು 
ಧಾನ -ಧರ್ಮ  ಸೇವೆ ಗೈದು
ಬದುಕಲಿ ನೀ  ಮುನ್ನಡೆದು

ಜಗದ  ಜನಕೆ  ಮಾದರಿಯಿತ್ತೆ
ಜಗದಿ  ಜನರ    ರಂಜಿಸುತ್ತ
ಜಗದ ಜನ ನಾಯಕನಿವನು
ಮೆರೆದ ಮೇರು ನಟನಿವನು

ದೇವನಲ್ಲಿ  ಲೀನವಾಗಿ 
ಸಾಗೀ ದೂರ ತಿಂಗಳಾಗಿ
ಹೃದಯ ಗೆದ್ದ ಸಾಹುಕಾರನು
ಮರೆಯಾದ ಮಾಣಿಕ್ಯನಿವನು

ದೂರ ದೂರ ನಡೆದೆ ನೀನು
ದೀನರನ್ನು ಪೊರೆದು ನೀನು
ಮತ್ತೆ ಬಾರದೆಂದು ನೀನು 
ಜಗವ ತೊರೆದು ಬಿಟ್ಟೆ ನೀನು
       ಮರಳಿ ಬಾರೇಯಾ.....

ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೩೦/೧/೨೨






Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)