ಮಲೆನಾಡಿನ ಸೊಬಗು

*ಮಲೆನಾಡಿನ *ಸೊಬಗು*

ಮಲೆನಾಡಿನ ಅಡಿಕೆಯ ತೋಟವು ನೋಡಲು ಅದುವೆ ಬಲು ಚೆನ್ನ
ಹಸುರಿನ ಹೊದಿಕಯ ತೋಟವು ನೋಡಲು ಅದುವೆ ಬಲು ಅಂದ
ಚಂದದಿ ಮರಗಳ ಹೊಂದಿಸಿರುವ ಬಗೆ ನೋಡಲು ಕಣ್ಣಿಗೆ ಅದುವೆ ಆನಂದ
ನಮ್ಮಯ ನಾಡಿನ ಜನರದು ಕೃಷಿಯಲಿ ಹೆಚ್ಚಿನ ಪರಿಣಿತಿ ಪಡೆದಿಹರು.
ಸತತವು ಕೃಷಿಯಲೆ ಕಾಯಕ ಗೈಯುತ ನೆಮ್ಮದಿ ಅದರಲೆ ಕಾಣುವರು
ಪ್ರತಿದಿನ ದನಕರು,ಹೊಲಮನೆ , ತೋಟದ  ಕಾಯಕ ಅದರಲೆ 
ಹಿರಿಹಿರಿ ಹಿಗ್ಗುವರು
ಕಾಯಕವೇ ಕೈಲಾಸ ಎನ್ನುವ ಗಾದೆಯ ಮಾತನು ತಪ್ಪದೆ ಅವರು ಪಾಲಿಪರು
ದಿನವು ತಪ್ಪದೆ ತಮ್ಮಯ ಕಾಯಕ ಗೈಯುತ ಮುದದಲಿ
ವದನದಿ ನಸು ನಗುವ ಬೀರುತ ಮುಂದಿನ ಕೆಲಸಕೆ ಸಾಗುವರು.


ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೭/೧೨/೨೧

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)