ಮಾತನಾಡುವ ಸಮಯದಲಿ ಮಾತನಾಡುವ ಕಲೆಯು ಮೌನದಲಿರುವ ಸಮಯ ಬಂದಾಗ ಮೌನಕ್ಕೆ ಬೆಲೆಯು ಮಾತು, ಮೌನದ ಅರ್ಥ ತಿಳಿದರುವುದು ಒಳ್ಳೆಯದು ಸಮಯ , ಸಂದರ್ಭಕೆ ತಕ್ಕಂತ ನಡೆಯೆ ಉತ್ತಮವದು. ಮೌನ ಬರುವುದೆಲ್ಲವು ಬರಲಿ ನಡೆ ಮುಂದೆ ಸಹಿಸುತಲಿ ಬಳಲಿ ಬೆಂಡಾಗದಿರಲಿ ಮನವೆಂದಿಗೂ ಬಾಡದಿರಲಿ ದೇವಕರುಣೆಯೊಂದಿರಲಿ ತಾಳ್ಮೆಯದು ಹೆಚ್ಚಿರಲಿ ದೇವನಿತ್ತಿಹ ಭಾಗ್ಯ ಕಣ್ಣೆದುರಲಿ ಮೌನದಲಿ ಶರಣಾಗು ದೇವನಲ್ಲಿ🙏🙏 #ಭಾಗ್ಯೋದಯ ✍🏻ಭಾಗ್ಯಶ್ರೀ ಕೆಕ್ಕಾರ
ಬದುಕಿನ ಪರೀಕ್ಷೆಗಳಿಗೆ ಪಾಠಗಳ ನೀಡುವುದಿಲ್ಲ ಅನಿರೀಕ್ಷಿತ ಪರೀಕ್ಷೆಗಳು ದಿನ ದಿನವು ಬರುವುದಲ್ಲ ನಕಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅವನೆಣಿಕೆಯ ಬಾಳುವೆಯದು ಅರಿವಿಹುದಲ್ಲ ಶಾಲೆಯಲ್ಲಿ ಮಾರ್ಕ್ಸ್ ಗಾಗಿ ಓದು ಓದು ಎನ್ನುವ ಶಿಕ್ಷೆ ಬದುಕಿನಲಿ ನಿರೀಕ್ಷಿಸದೆ ಬರುವ ತರ ತರದ ಪರೀಕ್ಷೆ ಪರೀಕ್ಷೆ ಬರೆದು ಮಾರ್ಕ್ಸ್ ಗಾಗಿ ಕಾಯುವ ನಿರೀಕ್ಷೆ ಬದುಕಿನಲಿ ಅವನಾಶೀರ್ವಾದವೆ ನಮಗೆ ಶ್ರೀರಕ್ಷೆ ಅತಿಯಾದ ಆಸೆಗಳ ಬೆನ್ನತ್ತಿ ಸಾಗುವರು ಆರೋಗ್ಯ ಹದಗೆಟ್ಟಾಗ ಕೊರಗುವರು ಆರೋಗ್ಯಕ್ಕಾಗಿ ದುಡಿದಿರುವುದ ಸುರಿವರು ವತ್ತಡದಲೇ ಬದುಕ ಸವೆಸಿ ನಡೆವರು ಬದುಕಿನಲಿ ಆಸೆಗಳಿಗೆ ಕೊನೆಯೆಂಬುದಿಲ್ಲ ಮನಸನು ಹಿಡಿತದಲಿರಿಸಿ ಸಾಗಲೇ ಬೇಕಲ್ಲ ಅತಿಯಾದರೆ ಅಮೃತವು ವಿಷವವಾಗುವುದು ಅದನರಿತು ಬಾಳು ನಡೆಸಲು ಸುಂದರವದು