ಅಪ್ಪು ಸರ್
ದೀರ್ಘ ಕಾಲ ಬಾಳಲಿಲ್ಲ
ಅಲ್ಪದಲಿ ಬದುಕಿ ಬಾಳಿ
ನಿರತ ನಗುವ ಬೀರಿ ಮುದದಿ
ಹೃದಯ ಗೆದ್ದ ವೀರನಿವನು
ಮಲ್ಲಿಗೆ ತೆರದಿ ಅರಳಿ ನಿಂತು
ಮಂದಹಾಸ ಬೀರಿ ನಲಿದು
ಧಾನ -ಧರ್ಮ ಸೇವೆ ಗೈದು
ಮುಂದೆ ಸಾಗಿ ನಡೆದನು
ಜಗದ ಜನಕೆ ಮಾದರಿಯಾಗಿ
ಜಗದಿ ಜನರ ರಂಜಿಸುತ್ತ
ಜಗದ ಜನ ನಾಯಕನಿವನು
ಮೆರೆದ ಮೇರು ನಟನಿವನು
ದೇವನಲ್ಲಿ ಲೀನವಾಗಿ
ಸಾಗೀ ದೂರ ತಿಂಗಳಾಗಿ
ಹೃದಯ ಗೆದ್ದ ಸಾಹುಕಾರನು
ಮರೆಯದ ಮಾಣಿಕ್ಯನಿವನು
ದೂರ ದೂರ ನಡೆದೆ ನೀನು
ಧೀನರನ್ನು ಪೊರೆದು ನೀನು
ಮತ್ತೆ ಬಾರದೆಂದು ನೀನು
ಜಗವ ತೊರೆದು ಬಿಟ್ಟೆ ನೀನು
ಮರಳಿ ಬಾರೇಯಾ.....
ಭಾಗ್ಯಶ್ರೀ ಕೆಕ್ಕಾರ
೩೦/೧/೨೨