ಬೆನಕನಿಗೆ ಶರಣು
🙏 *ಎಮ್ಮನು ಕಾಯೋ ಓ ಬೆನಕ* 🙏
ಬೆನಕ ಬೆನಕ ಏಕದಂತ
ಎಮ್ಮನು ಕಾಯೋ ಕೊನೆತನಕ//ಪ//
ಭಕ್ತಿಯಿಂದಲಿ ನಾ ಪೂಜಿಸುವೆ
ರಾಗ ತಾಳದಿ ಭಜನೆಯ ಪಾಡುವೆ
ವಿಘ್ನನಿವಾರಕ ನೀನು ಗಣೇಶ
ಬುದ್ದಿಪ್ರದಾಯಕ ಹೇ ವಿನಾಯಕ//೧//
ಕಷ್ಟವ ಕಳೆಯುವ ದೊರೆಯಾಗಿ
ಇಷ್ಟವ ನೀಡುವ ಹರಿಯಾಗಿ
ನೆಮ್ಮದಿ ನೀಡುವ ಗಣನಾಥ
ನಮ್ಮನು ಹರಸೋ ವರದಾತಾ//೨//
ಭಕ್ತಿಯ ಮಾರ್ಗವ ತೋರಿಸು ದೊರೆಯೇ
ಭಕ್ತಿಯ ಪಥದಲಿ ನಡೆಸೋ ದೊರೆಯೇ
ಚಂಚಲ ಮನಸನು ನೀಗಿಸು ದೊರೆಯೇ
ಸಂಚಿತ ಕರ್ಮವ ಕರಗಿಸು ದೊರೆಯೇ//೩//
ನಿನ್ನಯ ಪಾದಕೆ ಎರಗುವೆ ದೇವ
ನಿನ್ನಯ ನಾಮವ ಸ್ಮರಿಸುವೆ ದೇವ
ಗೌರಿಯ ಪುತ್ರ ಗಣೇಶ್ವರ ದೇವ
ಗೌರವದಲಿ ನಡೆಸೆಮ್ಮನು ದೇವ//೪//
✍️✍️ ಭಾಗ್ಯಶ್ರೀ ಕೆಕ್ಕಾರ