ದಾರಿಗಳು
*💐ದಾರಿಗಳು ಹಲವಾರು*💐
ಬದುಕಲಿಕೆ ದಾರಿಗಳು
ನೂರಾರು
ಅವರವರ ತೆರದಲಿ
ದಾರಿ ಇದ್ದರೆ ಮಾತ್ರ
ದಾರಿ ಹುಡುಕುವ ಚಿಂತೆ
ದಾರಿಯೇ ಇಲ್ಲದಿರೆ
ಬದುಕು ಬಯಲಂತೆ
💐 *ಪ್ರಕೃತಿ💐*
ಮರಗಳಿಗೆ ಕೊಂಬೆಗಳು
ನೂರಾರು
ಜೋರಾಗಿ ಗಾಳಿ ಬೀಸಲು
ಕೊಂಬೆಗಳು ಉರುಳುವ ಚಿಂತೆ!
ಗಾಳಿಯೇ ಇಲ್ಲದಿರೆ
ಮಾನವಗೆ ಉಸಿರಿನ ಚಿಂತೆ !
💐 *ಹೆಮ್ಮರ* 💐
ಹೆಮ್ಮರವು ತಾ ಬೆಳೆದು ನಿಂತಿಹುದು ಭುವಿಯಲಿ
ಮೊಗ್ಗಾಗಿ, ಹೂವಾಗಿ, ಕಾಯಾಗಿ ,ಹಣ್ಣಾಗಿ,
ಹಣ್ಣು ಪಕ್ವವಾಗಿ ಬೀಜವದು ಭುವಿಯಲಿ
ಉದುರಿ ಪುಟ್ಟ ಸಸಿಯಾಗಿ, ಗಿಡವಾಗಿ ,ಮರವಾಗಿ
ಬೆಳೆದು ಹೆಮ್ಮರವಾಗಿ ನಿಲ್ಲುವುದು ಪ್ರಕೃತಿಯಲಿ
ಭಾಗ್ಯಶ್ರೀ ಕೆಕ್ಕಾರ
೯/೨/೨೨