ಅರಿತು ಬಾಳು

ಜನಿಸಿದಾಗ ಜ್ಞಾನವಿಲ್ಲ , ಬಾಲ್ಯದಲಿ ಅಪ್ಪ ಅಮ್ಮ
ಸರ್ವರನೂ   ಸಾಕಿ ಸಲಿಪರು
ಯೌವನದಲಿ ಎಲ್ಲಾ ತಿಳಿದ ಹಾಗೆ ನಟಿಪರು
ಕೆಲಸ ದೊರಕೆ  ಧನದ ಹಿಂದೆ ಓಡಿ ನಲಿಪರು

ಮುಪ್ಪು ಬರಲು ಅರಿವುದೆಲ್ಲ
ಸಮಯ ಸರಿದು ಬಿಡುವದೆಲ್ಲ
ಜನನ ಮರಣ ಎರಡರ  ನಡುವೆ
ಧನವೆ ಎಲ್ಲವೆಂದು  ಮೆರೆವ ಮನುಜರು !

ಧನ ,ಕನಕ ,ವಜ್ರ ,ವಡವೆ ಎಲ್ಲ ಬಿಟ್ಟು 
ತೆರಳಬೇಕು ಯಮನ ಕರೆಯು ಬರಲದು
ಧನಕ್ಕಿಂತ ಗುಣವೇ ಮೇಲು  ಎಂಬುದನು
ಅರಿತು ಬಾಳು   ಮೂಢ ಮನುಜನೆ !

✍️✍️ಭಾಗ್ಯಶ್ರೀ ಕೆಕ್ಕಾರ
೨೩/೦೨/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)