ಸಂಗೀತದ ಹೆಮ್ಮರ

ಸಂಗೀತವೆಂಬ ಹೆಮ್ಮರದಲಿ
ಸ್ವರ,ಲಯ ,ತಾಳದ ಬಳ್ಳಿಯಲಿ
ನವನವೀನ  ಸುಮವರಳಿ
ಲೋಕವೋಗರಿಗೆ ನೀಡಿದಳು

ಮಧುರ ಮಧುರ ಗಾನವ
 ಪಾಡಿ ಪಾಡಿ  ಮನವ
ಗೆದ್ದು ಗೆದ್ದು ಪೋದೆಯಲ್ಲ
ನಿರತ ಮನದಿ ನೆನೆವರೆಲ್ಲ

ಕಂಠದಲಿ  ಕೋಗಿಲೆಯಂತೆ
ಸಾಧನೆಯಲಿ  ಮೇಲೆನಿಂತೆ
ವಿವಿಧ  ಭಾಷೆಯ ಹಾಡಿನಿಂತೆ
ಪ್ರಶಸ್ತಿಗಳ ಮಹಾಪೂರವಂತೆ

ಲತಾ ದೀದಿ ನಿಮಗಿದೋ 
ಗೀತ ನಮನ ಸಲಿಸುವೆ
ಮರಳಿ ಜನುಮ ತಾಳಿ 
ಶಾರದೆಯೇ  ಬಾ ಮರಳಿ 

ಲತಾ ಮಂಗೇಶ್ಕರ್ ಇವರಿಗೆ ಅಶ್ರುತರ್ಪಣ🙏🙏



ಭಾಗ್ಯಶ್ರೀ ಕೆಕ್ಕಾರ
ಭಾಗೀ ಹೆಗಡೆ ಕಲ್ಲಳ್ಳಿ






Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)