ಪತಿ (ಗಂಡ)
ತುಣುಕು ಮಿಣುಕು
ವಿಷಯ - ಪತಿ (ಗಂಡ)
ದಿನಾಂಕ ೧/೦೫/೨೦೨೨
ಅಪ್ಪ ,ಅಮ್ಮನ ಮನೆಯನ್ನು ಬಿಟ್ಟು ,ಅಕ್ಕ, ತಂಗಿಯರ ಪ್ರೀತಿಯ ಇರಿಸಿ ,ಅಣ್ಣ , ತಮ್ಮಂದಿರ ಜಗಳವ ಮರೆತು ,ತವರನ್ನು ಬಿಟ್ಟು , ಪತಿಯೇ ಸರ್ವಸ್ವ ಎಂದು ಆತನ ಕೈಹಿಡಿದು ಗಂಡನ ಮನೆ ಸೇರಿ ,ಅಲ್ಲಿರುವ ಎಲ್ಲರ ಜೊತೆಗೂ ಹೊಂದಿ ಕೊಂಡು ನಡೆಯುವವಳು ಹೆಣ್ಣು. ಪತಿಯಾದವನೂ ಸಹ ಅವಳ ತಪ್ಪುಗಳನ್ನ ಮನ್ನಿಸುತ ,ತುಸು ತಿಳುವಳಿಕೆಯನ್ನ ಆವಾಗಾವಾಗ ಹೇಳುತ್ತಾ ,ಅವಳನ್ನು ತುಂಬು ಹೃದಯದಿಂದ 💕💕💗💗ಪ್ರೀತಿಯಿಂದ ಅವಳನ್ನು ಕಾಣಬೇಕು ,ಆಗ ಅವಳೂ ಸಹ ಗಂಡನನ್ನು ಬಿಟ್ಟರೆ ನನಗೆ ಮತ್ಯಾರಿಲ್ಲ, ನೀನೇ ನನ್ನ ಪಾಲಿನ ದೇವರೆಂದು ಚಂದದಲಿ ಪತಿಯೊಂದಿಗೆ ಹೊಂದಿಕೊಂಡು ನಡೆಯುವಳು .ಪತಿ -ಪತ್ನಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಬಾಳು ಬಂಗಾರವಾಗಲು ಸಾಧ್ಯ. ಎರಡು ಕೈ ಸೇರಿದರೆ ಮಾತ್ರ ಚೆಂದದ ಚಪ್ಪಾಳೆ ಸಾಧ್ಯ ,ಇಬ್ಬರೂ ಸೇರಿಕೊಂಡು ನಡೆದರೆ ಮಾತ್ರ , ಸುಂದರ ❤️❤️ ಸಂಸಾರ ಎಲ್ಲರದ್ದಾಗುವುದು. ಮನೆಯಲ್ಲಿ ಪತಿಗೆ ಸದಾ ಗೌರವ ಇದ್ದೆ ಇದೆ.ಹಿರಿಯರೂ🙏🙏 ಅವರೇ ,ಪತಿದೇವರಿಗೆ ಸದಾ ನಮನಗಳು🙏🙏
ಭಾಗ್ಯಶ್ರೀ ಕೆಕ್ಕಾರ
೧/೦೫/೨೦೨೨