🙏ಗಣಪನಿಗೆ ಶರಣು🙏





ಬೆನಕ  ಬೆನಕ  ಏಕದಂತ
ನಮ್ಮನು ಕಾಯೋ ಕೊನೆತನಕ//ಪ//

ಭಕ್ತಿಯಿಂದಲಿ ನಾ ಪೂಜಿಸುವೆ
ರಾಗ ತಾಳದಿ ಭಜನೆಯ ಪಾಡುವೆ
ವಿಘ್ನನಿವಾರಕ  ನೀನು  ಗಣೇಶ 
ಬುದ್ದಿಪ್ರದಾಯಕ ಹೇ  ವಿನಾಯಕ//೧//

ಕಷ್ಟವ ಕಳೆಯುವ ದೊರೆಯಾಗಿ
ಇಷ್ಟವ ನೀಡುವ ಹರಿಯಾಗಿ
ನೆಮ್ಮದಿ ನೀಡುವ ಗಣನಾಥ
ನಮ್ಮನು ಹರಸೋ ವರದಾತಾ//೨//

ಭಕ್ತಿಯ ಮಾರ್ಗವ ತೋರಿಸು ದೊರೆಯೆ
ಭಕ್ತಿಯ ಪಥದಲಿ ನಡೆಸೋ ದೊರೆಯೆ
ಚಂಚಲ ಮನಸನು ನೀಗಿಸು ದೊರೆಯೆ
ಸಂಚಿತ  ಕರ್ಮವ  ಕರಗಿಸು  ದೊರೆಯೆ//೩//

ನಿನ್ನಯ  ಪಾದಕೆ ಎರಗುವೆ ದೇವ
ನಿನ್ನಯ ನಾಮವ ಸ್ಮರಿಸುವೆ ದೇವ
ಗೌರಿಯ ಪುತ್ರ ಗಣೇಶ್ವರ ದೇವ
ಗೌರವದಲಿ ನಡೆಸೆಮ್ಮನು ದೇವ//೪//

✍️✍️ ಭಾಗ್ಯಶ್ರೀ ಕೆಕ್ಕಾರ
೨೩/೦೨/೨೦೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)