ಕಾಯಕವೆ ಕೈಲಾಸ

ಕಾಯಕವೆ  ಕೈಲಾಸ, ಕಾಯಕವೆ ನನ್ನುಸಿರು
ವರುಷವದು ದೇಹಕ್ಕೆ ,ಹರುಷವಿದೆ ಬಾಳಿನಲಿ
ವರುಷದಲೂ ,ಹರುಷವ ಮರೆಯದಿರು ಮನಸಿನಲಿ
ಸಂತಸದಿ ಕಾಯಕವ ಮುನ್ನಡೆಸೋ ಹರಿಯೇ !

ಮಗುವಿನ ತರದಲಿ  ನಗುತಿರುವ ಜೀವ
ಕಾಯಕವ ನಡೆಸುತಿದೆ ಹಿರಿದಾದ ದೇಹ
ಸಂತಸದ ಬದುಕನ್ನು ನಡೆಸಲನುಗೃಹವಿತ್ತು
ಕಾಪಾಡು ಎಮ್ಮನು ಅನುದಿನವು ದೇವಾ !

ಮುದಿ ತನದಲ್ಲೂ ದುಡಿಯುತಿಹ ದೇಹ
ತನ್ನೊಟ್ಟೆ  ಪಾಡನು ಸಾಗಿಸುವ ಜೀವ
ಯಾರಿಗೂ ಹೊರೆಯಾಗದಂತೆ ಬದುಕಿ
ಜೀವನದ ಪಯಣದಿ ಕೊನೆಗೊಳುವ ದೇಹ


ಭಾಗ್ಯಶ್ರೀ ಕೆಕ್ಕಾರ








Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)