ಶಿವರಾತ್ರಿ
🙏🙏 *ಶಿವ ಶಿವ ಶಂಭೋ* 🙏🙏
🙏🙏 *ಶಿವ ಶಿವ ಶಂಭೋ** 🙏🙏
ಶಿವ ಶಿವ ಎಂದರೆ ಭಯವಿಲ್ಲ
ಶಿವನಾಮವೆ ಮನದ ತುಂಬೆಲ್ಲ
ಶಿವನನು ನೆನೆಯದ ಬದುಕಿಲ್ಲ
ಶಿವನನು ಮರೆತರೆ ಬಾಳಿಲ್ಲ
ಪತ್ರೆ ಪುಷ್ಪವ ಅರ್ಪಿಸುವೆ
ಪಾದಕೆ ಎರಗಿ ನಮಿಸುವೆ
ಕಷ್ಟವ ಸರಿಸಿ ನಡಿಸೋ ದೊರೆಯೆ
ಇಷ್ಟವ ಇರಿಸಿ ನಮಿಸುವೆ ಹರಿಯೆ
ಮನದಿ ಶಾಂತಿಯ ತುಂಬಿಸು ದೇವ
ಸಂಚಿತ ಪಾಪವ ತೊಲಗಿಸು ದೇವ
ಬಡವರ ಪಾಲಿನ ಮಹೇಶ್ವರ ದೇವ
ಉದ್ದರಿಸೆಮ್ಮನು ನಿರುತವು ದೇವ
ಹಣೆಯಲಿ ವಿಭೂತಿ ಧರಿಸಿಹನೆ
ಕೊರಳಲಿ ರುದ್ರಾಕ್ಷಿ ಸರದವನೆ
ಶಿರದಲಿ ಗಂಗೆಯ ಹೊತ್ತವನೆ
ಪಾಪವಿನಾಶನ ಪರಶಿವನೆ
ಶಿವರಾತ್ರಿಯ ದಿನ ಜಾಗರಣೆ
ನಿನ್ನೆಯ ನಾಮವ ಪಾಡುವೆವು
ಸರ್ವರ ಮನಸು ಬುದ್ದಿಯ ಒಟ್ಟಿಗೆ
ಸೇರಿಸಿ ಉದ್ದರಿಸೆಲ್ಲರ ಹೇ ಶಿವನೇ
✍️✍️ ಭಾಗ್ಯಶ್ರೀ ಕೆಕ್ಕಾರ
೧/೦೩/೨೨