🙏🙏ಅಮ್ಮ🙏🙏

ಅಮ್ಮನೆನಗೆ ಜನ್ಮವಿತ್ತು
ಸಾಕಿ ಸಲಹಿ ಮುತ್ತನಿತ್ತು
ಕೈಗಳಿಂದ ತುತ್ತನಿತ್ತು
ಪ್ರೀತಿಯಿಂದ ಬೆಳೆಸಿದೆ

ಮಮತೆಯಿಂದ ಕೆಲಸ ಕಲಿಸಿ 
ಸರಿ , ತಪ್ಪು  ತಿಳಿಸಿ  ಬೆಳೆಸಿ
ಒಪ್ಪದಾರಿಯಲ್ಲೆ  ನಡೆಸಿ
ಪ್ರೀತಿಯಿಂದ ಬೆಳೆಸಿದೆ

ನೋವನೆಲ್ಲ ಮರೆತು ಬಾಳ್ವ 
ನಗಿಸಿ ನಡೆವ ಪಾಠ ಕಲಿಸಿ
ಶ್ಲೋಕಗಳನು ಕಲಿಸಿ ಬೆಳೆಸಿ
ಪ್ರೀತಿಯಿಂದ ಬೆಳೆಸಿದೆ

ಅಪ್ಪನಿಂದ  ಬೈಸಿಕೊಂಡು
ಮನದನೋವ ಸಹಿಸಿಕೊಂಡು
ತಾಳ್ಮೆಯನ್ನು ಬೆಳೆಸಿಕೊಂಡು
ಪ್ರೀತಿಯಿಂದ ಬೆಳೆಸಿದೆ

ದೇವನಿತ್ತ ವರವು ನೀನು
ನಿನಗೆ ಬೇರೆ ಸಾಟಿಯಿಲ್ಲ
ನಿನ್ನ ಮರೆವ  ಬಾಳೆಇಲ್ಲ
ಪ್ರೀತಿಯಿಂದ ಬೆಳೆಸಿದೆ


ಭಾಗ್ಯಶ್ರೀ ಕೆಕ್ಕಾರ
೨೯/೦೫/೨೦೨೨








Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)