ಚಿಂತನ ಮಂಥನ
ವಾರದ ಚಿಂತನ ಮಂಥನ - ೭
ಧಾರ್ಮಿಕ ಆಚರಣೆಗಳಿಂದ ಇಂದಿನ ಯುವಕರು ದೂರವಾಗುತ್ತಿದ್ದಾರೆ .
ನಿಜ , ಕಾರಣ ಹಲವಾರು..
ಇಂದಿನ ಯುವ ಜನರು ಬೆಳಿಗ್ಗೆ ಬೇಗ ಏಳುವುದಿಲ್ಲ.
ಬೆಳಗಿನ ಕೆಲಸಗಳನ್ನು ಬೇಗ ಮುಗಿಸುವುದಿಲ್ಲ. ಏಳುವಾಗಲೇ ಸಮಯವಾಗಿರುತ್ತದೆ . ಹಳ್ಳಿಗಳಲ್ಲಿ ವಾಸವಿಲ್ಲ ,ಎಲ್ಲಾ ಪಟ್ಟಣ ಸೇರಿದ್ದಾರೆ , ಹೊಟ್ಟೆ ಪಾಡಿಗಾಗಿ.
ಮೊದಲೆಲ್ಲ ಹಳ್ಳಿಯಲ್ಲಿ ವಾಸವಿರುತ್ತಿದ್ದರು , ಬೇಕಾದಷ್ಟು ಜಾಗ , ಸುಂದರವಾದ ಹೂದೋಟ , ಚಿಕ್ಕದಾದರೂ ಓಡಾಡಲು ತೋಟವಿರುತ್ತಿತ್ತು.
ಇಂದು ಹಾಗಿಲ್ಲ , ಪಟ್ಟಣಗಳಲ್ಲಿ ಮಹಡಿಯಮೇಲೆ, ಅಪಾರ್ಟ್ಮೆಂಟ್ ಗಳಲ್ಲಿ ವಾಸ. ಮೊದಲಿನವರು (ಹಿರಿಯರು )ಬೇಗ ಎದ್ದು ಹೂ ಕೊಯ್ದು , ಸ್ನಾನ ಮಾಡಿ ಪೂಜೆ ಮಾಡಿ ,ಬೆಳಗಿನ ಉಪಹಾರ ತಿನ್ನುತ್ತಿದ್ದರು .ಅಲ್ಲಿ ಅನುಕೂಲಕರ ವಾತಾವರಣ ಸಹ ಇರುತ್ತಿತ್ತು.ಆದರೆ ಇಂದಿನ ಸಮಾಜದಲ್ಲಿ ಅದು ಕಷ್ಟವಾಗಿದೆ.ಹಿರಿಯರಾದವರು ಹಳೆಯ ಪದ್ಧತಿಗಳನ್ನ ಪಾಲಿಸಿದರೆ ಮನೆಯಲ್ಲಿರುವ ಯುವಜನತೆ ಕೂಡಾ ಅದನ್ನು ಪಾಲಿಸುತ್ತಾರೆ."ನೋಡಿ ಕಲಿ ,ಮಾಡಿ ತಿಳಿ "ಎನ್ನುವ ಹಾಗೆ ಹಿರಿಯರೆ ಹಳೆಯ ಪದ್ಧತಿಗಳನ್ನು ಬಿಡುತ್ತಾ ಬಂದರೆ , ಇಂದಿನ ಯುವಜನತೆ ಕೂಡಾ ಅದನ್ನ ಕೈ ಬಿಡುವುದರಲ್ಲಿ ಸಂದೇಹವೇ ಇಲ್ಲ.
ಅಪ್ಪ ಧಾರ್ಮಿಕ ಆಚರಣೆಗಳಿಂದ ಕೂಡಿದವರಾಗಿದ್ದರೆ ,ಮಕ್ಕಳೂ ಸಹ ಅದನ್ನು ನೋಡಿ ತಾನೂ ಮಾಡಬೇಕು ,ಪಾಲಿಸಬೇಕೆಂದುಕೊಳ್ಳುತ್ತಾರೆ. ಇಂದಿನ ದಿನಗಳಲ್ಲಿ ಅಪ್ಪ ಮಕ್ಕಳು ಯಾರಿಗೂ ಸಮಯವೇ ಇಲ್ಲ .ಬೆಳಗಾದರೆ ಸಾಕು ಮನೆಯಿಂದಲೇ ಕೆಲಸ ಎನ್ನುವದೊಂದು ಬಂದು ಬಿಟ್ಟಿದೆ.ಉಪಹಾರಕ್ಕೂ ಸಮಯವಿಲ್ಲ.ಲ್ಯಾಪ್ ಟಾಪ್ ಹಿಡಿದು ಕೊಣೆಯಲ್ಲಿ ಕುಳಿತರೆ, ಬೆಳಗಿನಿಂದ ಸಂಜೆಯವರೆಗೆ ಅಲ್ಲಿಯೇ ಕೆಲಸ .ಊಟ , ತಿಂಡಿ , ಟೀ ,ಕಾಫಿ ಎಲ್ಲವೂ ಅಲ್ಲಿಗೆ ಹೋಗಿ ಬಿಡುತ್ತದೆ.
ಇನ್ನೆಲ್ಲಿ ಯಾವುದಕ್ಕೆ ಸಮಯ.ಹಳ್ಳಿಗಳಲ್ಲಿರುವ ಜನರು ಕೆಲವು ಆಚರಣೆಗಳನ್ನು ಇನ್ನೂ ಬಿಟ್ಟಿಲ್ಲ ,ಆದರೆ ಹಳ್ಳಿಗಳಲ್ಲಿರುವ ಜನರು ತುಂಬಾ ಕಡಿಮೆ. ಧನಗಳಿಸುವ ಭರದಲ್ಲಿ ಬದುಕಿನ
ಜೊತೆ ಧಾವಂತದ ಓಟ , ಯಾವುದಕ್ಕೂ ಸಮಯವಿಲ್ಲ ಎನ್ನುವ ಸ್ಥಿತಿಗೆ ಯುವ ಜನತೆ ಬಂದು ನಿಂತಿದೆ . ಒಮ್ಮೆ ಸಮಯವಿದ್ದರೂ ,ಯಾವುದೇ ಧಾರ್ಮಿಕ ಆಚರಣೆಗಳಿಗೆ, ಅನುಕೂಲಕರ ವಾತಾವರಣ ಇಲ್ಲವೆನ್ನುವುದು ನನ್ನ ವಾದ.
✍️✍️ ಭಾಗ್ಯಶ್ರೀ ಕೆಕ್ಕಾರ