ನೆನಪಿನಂಗಳದಿಂದ
*ನೆನಪಿನಂಗಳದಿಂದ*
ಅಮ್ಮಾ ಎನ್ನಲು
ಮನದಲಿ ಹರುಷವು
ಅಮ್ಮಾ ಎನ್ನದ
ದಿನವೇ ಇಲ್ಲವು
ಅಪ್ಪಾ ಎನ್ನಲು
ಏನೋ ಭಯವು
ಭಯದಲಿ ಭಕ್ತಿಯು
ನಿತ್ಯವು ಅಡಗಲು
ಅಕ್ಕಾ ಎನ್ನಲು
ಏನೋ ಹಿತವು
ಹಿತದಾ ನುಡಿಗಳು
ಅಮ್ಮನ ತೆರದಲು
ತಂಗಿ ಎನ್ನಲು
ಪ್ರೀತಿಯ ನುಡಿಯು
ಬಾಲ್ಯದ ನೆನಪು
ಮೂಡುತ ಲಿಹುದು
ಅಣ್ಣ ಎನ್ನಲು
ಭಾವದ ಬೆಸುಗೆ
ಭಾವವೇ ತುಂಬಿದೆ
ಮನದ ಒಳಗೆ
ತಮ್ಮ ಎನ್ನಲು
ಎಲ್ಲ ನುಡಿವೆ
ಸಿಹಿಯ ನೆನಪು
ದಿನವೂ ಇರಲು
ಮನದ ಮೂಲೆಯಲಿ
ಅವಿತ ಭಾವಗಳು
ಗಮನ ಸೆಳೆಯಲವು
ನೆನಪದು ಕುಣಿವವು
ಹಿತದ ನೆನಪದು
ಇರಲಿ ಮನಸಲಿ
ಬದುಕಿನ ಪಯಣವ
ಖುಷಿಯಲಿ ನಡೆಸುವ
✍️✍️ ಭಾಗ್ಯಶ್ರೀ ಕೆಕ್ಕಾರ
೧೪/೦೬/೨೦೨೨