ಹೆಣ್ಣು
🌺 *ಹೆಣ್ಣು* 🌺
ಹೆಣ್ಣಿಗೆಲ್ಲಿದೆ ಸ್ವಾತಂತ್ರ್ಯ
ಸದಾ ಅವಳು ಪರತಂತ್ರ
ಅಮ್ಮನ ಮನೆಯಲಿ
ಅಪ್ಪ-ಅಮ್ಮನ ಜೊತೆಗೆ
ಗಂಡನ ಮನೆಯಲಿ
ಅತ್ತೆ- ಮಾವ, ಪತಿ ಜೊತೆಗೆ
ಅವಳಿಗೂ ಭಾವಗಳಿವೆ
ನೂರಾರು ಬಯಕೆಗಳಿವೆ
ಮನದ ಗೂಡಿನಲಿ
ಹೇಳಲಾರದ ನೋವುಗಳು
ಕೊರೆಯುತಿವೆ ಮನಸಿನಲಿ
ಅನುದಿನವು ಬದುಕಿನಲಿ
ಅಡಿಗೆ ಮನೆ ಮಕ್ಕಳ ಕೆಲಸ
ಪತಿ ಅತ್ತೆ ಮಾವರ ಜೊತೆ
ಹೊಂದಿಕೊಂಡು ಬಾಳು
ಜನ್ಮವಿತ್ತವರ ಮರೆಯದಿರು
ಮನಸಲ್ಲಿಯೂ ಮೆರೆಯದಿರು
ಸಂತಸದಿ ಮುಂದಕ್ಕೆ ಸಾಗುತಿರು
ಬದುಕಿನಲಿ ನೋವುಗಳು ಸಹಜ
ಅವುಗಳೊಡನೆ ಸಾಗಬೇಕು ಮನುಜ
ಎಲ್ಲ ಮರೆತು ಬಾಳಬೇಕು
ನಗು ನಗುತಾ ಸಾಗಬೇಕು
ಬದುಕು ಬಾಳ್ವೆ ಬಂದಂತೆ
ಎಳೆಯೋಣ ಬಾಳ ಬಂಡಿಯಾ
✍️✍️ಭಾಗ್ಯಶ್ರೀ ಕೆಕ್ಕಾರ
೧೬/೦೬/೨೦೨೨