ಅಮ್ಮನಾಗುವುದು ಸುಲಭವಲ್ಲ!

ಅಮ್ಮನಾಗಲು ಕಾಯಬೇಕು
ನವಮಾಸ ಹೊರಲೆ ಬೇಕು
ನೋವನೆಲ್ಲ ಸಹಿಸ ಬೇಕು
ಅಮ್ಮನಾಗುವುದು ಸುಲಭವಲ್ಲ!
 
ಗರ್ಭದಿಂದಾಚೆ ಬರಲು 
ಹಾಲುಣಿಸಿ ಬೆಳೆಸ ಬೇಕು
ನಿದ್ದೆ ಮರೆತು ಬಾಳಬೇಕು
ಅಮ್ಮನಾಗುವುದು ಸುಲಭವಲ್ಲ!

ಕೈಯ ತುತ್ತು ತಿನ್ನದಿರಲು
ಚಂದ್ರನನ್ನು ತೋರಬೇಕು
ಬರುವ ಗುಮ್ಮನೆನ್ನ ಬೇಕು
ಅಮ್ಮನಾಗುವುದು ಸುಲಭವಲ್ಲ!

ತೊದಲು ನುಡಿಯ ನುಡಿಯಬೇಕು
ಅಮ್ಮ ನೆನ್ನುವುದ ಕಲಿಸಬೇಕು
ನಗುವು ,ಅಳುವು ಇರಲು ಬೇಕು
ಅಮ್ಮನಾಗುವುದು ಸುಲಭವಲ್ಲ!

ಶಾಲೆಗೆ ಮೊದಲು ತೆರಳಬೇಕು 
ಅ,ಆ ,ಇ ,ಈ ಕಲಿಸಬೇಕು
ಸಂಸ್ಕಾರವಂತರಾಗ ಬೇಕು
ಅಮ್ಮನಾಗುವುದು ಸುಲಭವಲ್ಲ!

✍️✍️ ಭಾಗ್ಯಶ್ರೀ ಕೆಕ್ಕಾರ
       ೦೨/೦೬/೨೦೨೨


Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)