ಮುನಿಸೇತಕೆ ನಿನಗೆ ಮನಸೇ
ದತ್ತಪದ :: 🌺🌺ಮುನಿಸೇತಕೆ ನಿನಗೆ ಮನಸೇ🌺🌺
ಶೀರ್ಷೀಕೆ:: 💐💐ಮುನಿಸು ತರವಲ್ಲ💐💐
ಮುನಸಲ್ಲಿಯೂ ನೀ ಮುನಿಯದಿರು
ಪುಟ್ಟ ಪುಟ್ಟ ಕಾರಣ ನೀ ಹುಡಕದಿರು
ಎಲ್ಲ ಅನುಭವಿಸಿ ಸಂತಸದಿಂದಿರು
ಮತ್ತೆ ಮುನಿಸೇತಕೆ ನಿನಗೆ ಮನಸೇ...
ಮಗುವಿನ ತೆರದಂತೆ ಬಾಳು
ಮುನಿಸನ್ನು ಮರೆತು ಬಾಳು
ಸಂತಸದ ಖಣಿಯಾಗಿ ಬಾಳು
ಮತ್ತೆ ಮುನಿಸೇತಕೆ ನಿನಗೆ ಮನಸೇ..
ಮುನಿದರೆ ಮೊಗದ ನಗುವು ಮಾಯ
ಮುನಿದರೆ ಮನಸಿಗದು ಗಾಯ
ಮುನಿದರೆ ಆಯುಷ್ಯವದು ಅಲ್ಪ
ಮತ್ತೆ ಮುನಿಸೇತಕೆ ನಿನಗೆ ಮನಸೇ..
ಯಾರೇನಂದರೂ ಮುನಿಯದಿರು
ಮುನಿಸು ಪರಿಹಾರವಲ್ಲ ತಿಳಿದಿರು
ಬಂದಿಹುದ ಬಂದ ಹಾಗೆ ಸ್ವೀಕರಿಸು
ಮತ್ತೆ ಮುನಿಸೇತಕೆ ನಿನಗೆ ಮನಸೇ...
ಮುನಿಸದು ಸೊಗಸಲ್ಲ ನೆನಪಿಡು
ಮುನಿವದ ಮನಸಲ್ಲಿ ಮರೆತು ಬಿಡು
ಮತ್ತೆ ಮುನಿಸೇತಕೆ ನಿನಗೆ ಮನಸೇ
ಸಂತೋಷದಿಂದ ಸಾಗುತಿರು ಮನಸೇ...
✍️✍️ ಭಾಗ್ಯಶ್ರೀ ಕೆಕ್ಕಾರ
೦೪/೦೬/೨೦೨೨