ಸುನಂದಮ್ಮನ ಬದುಕು
ಸುನಂದಮ್ಮ ಇವರಿಗೆ ಮೂರು ಮಕ್ಕಳು.ಎರಡು ಹೆಣ್ಣು ,ಕೊನೆಯವ ಮಗ , ಮಕ್ಕಳೆಲ್ಲ ಚಿಕ್ಕವರಿರುವಾಗಲೇ ಗಂಡ ತೀರಿಕೊಂಡರು .ಹೇಗೋ ಕಷ್ಟ ಪಟ್ಟು ಮಕ್ಕಳನ್ನು ಓದಿಸಿ , ಹೆಣ್ಣು ಮಕ್ಕಳನ್ನ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಕೊಟ್ಟರು.ಮಗನೂ ಚೆನ್ನಾಗಿ ಓದಿ ಒಳ್ಳೆಯ ನೌಕರಿಯೂ ದೊರಕಿತು.ಹಣ ಸಂಪಾದನೆ ಚೆನ್ನಾಗಿಯೇ ಇತ್ತು.ದಿನಾಲೂ ಸಂಜೆ ಶರಾಬು ಕುಡಿಯುವ ಕೆಟ್ಟ ಅಭ್ಯಾಸ ಮಾಡಿಕೊಂಡಿದ್ದ ,ಅಮ್ಮ ಎಷ್ಟೇ ಬುದ್ಧಿ ಹೇಳಿದರೂ ಕೇಳುತ್ತಿರಲಿಲ್ಲ.ಮದುವೆ ಮಾಡಿದರೆ ಸರಿ ಹೋಗಬಹುದೆಂದು ಮದುವೆ ಸಹ ಮಾಡಿದಳು.ನಾಲ್ಕಾರು ವರ್ಷಗಳಾದರು ಮಕ್ಕಳಾಗಲಿಲ್ಲ. ಒಂದು ಚಿಕ್ಕ ಮಗುವನ್ನು ದತ್ತಕ್ಕೆ ತೆಗೆದುಕೊಂಡರು .ಆ ಮಗು ದೊಡ್ಡದಾದಾಗ ವಿಕಲಚೇತನ ವೆಂದು ತಿಳಿಯಿತು.ಎಷ್ಟೋ ಹಣವನ್ನೂ ಸಹ ಖರ್ಚು ಮಾಡಿದರು.ಜೊತೆಗೆ ಇವನ ಕುಡಿತದ ಚಟವೂ ಸಹ ಹೆಚ್ಚಾಯ್ತು.ಅಮ್ಮ , ಹೆಂಡತಿ ಯಾರು ಏನೇ ಹೇಳಿದರೂ ಕೇಳದೆ ,ಅವರನ್ನು ಹೊಡೆಯಲು ಪ್ರಾರಂಭಿಸಿದ .ಹೇಗೆ ಮಾಡಿ ಸರಿ ಮಾಡುವುದು ಎಂದು ಯೋಚಿಸಿ ದೇವರ ಮೊರೆ ಹೋದರು. ಯಾರು ಏನೇ ಹೇಳಿದರೂ ಕೇಳುತ್ತಿರಲಿಲ್ಲ.ಅಷ್ಟರಲ್ಲಿ ತೆಗೆದುಕೊಂಡ ಮಗು ಎಷ್ಟೇ ಹಣ ಖರ್ಚುಮಾಡಿದರೂ , ಒಮ್ಮೆ ಜ್ವರ ಬಂದ ಮಗು ಉಳಿಯಲೇ ಇಲ್ಲ. ಮಗು ತೀರಿಕೊಂಡಿತ್ತು. ಮತ್ತೆ ಕೆಲವೇ ಕೆಲವು ದಿನಗಳಲ್ಲಿ ಕುಡಿತದ ಚಟದಿಂದ ಇದ್ದ ಮಗನೂ ತೀರಿಕೊಂಡ.ಅಲ್ಲಿ ಮದುವೆ ಮಾಡಿ ಕೊಟ್ಟ ಹಿರಿ ಮಗಳು ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ತೀರಿಕೊಂಡಳು.ಎಲ್ಲ ದೇವನಿಚ್ಚೆ ಎಂದು ಅತ್ತೆ ,ಸೊಸೆ ತಾಯಿ ಮಗಳು ಎನ್ನುವಂತೆ ಜೀವನ ನಡೆಸುತ್ತಿದ್ದಾರೆ.