ಗಂಡ-ಹೆಂಡತಿ
ಮಾತು ಮಾತಿಗೆ ಮುನಿಯುತಿರ ಬೇಡ
ಮುನಿದರೆ ಆರೋಗ್ಯವದು ಹಾಳು ಮರೆಯಬೇಡ
ನುಡಿಯುತಿರು ಎದುರಿನಲಿ ಅನಿಸಿರುವದನ
ಭಾವನೆಗಳ ಬಚ್ಚಿಟ್ಟು ತೋರದಿರು ಕರುಣೆಯನ
ಮಾತು ಮಾತಿಗೆ ಜಗಳಕಾಯದಿರು
ತಪ್ಪನ್ನ ಹುಡುಕಿ ಹುಡುಕಿ ಹೇಳದಿರು
ತಿದ್ದುತ ತೀಡುತ ಸಾಗಿಸು ಪಯಣವ
ಜೊತೆಯಲಿ ನಲಿಯುತ ನಡೆಯುವ
ಶ್ರಾವಣ ಮಾಸ
ಹಬ್ಬಗಳ ಸಾಲು ಸಾಲು ಶ್ರಾವಣದಲಿ
ಹೆಣ್ಮಕ್ಕಳಿಗೆ ಸಮಯವಿಲ್ಲ ಮನೆಯಲಿ
ಸಿಂಗರಿಸುತಲಿರು ರಂಗೋಲಿ ತೋರಣ
ಮಾಡುತಲಿರು ಸಿಹಿ ಸಿಹಿಯ ಹೂರಣ
ಜನ್ಮ ಜನ್ಮದ ಮದುವೆಯ ಬಂಧ
ಬಿಡಿಸಲಾಗದ ನಮ್ಮೀ ಸಂಬಂಧ
ಪ್ರತಿ ದಿನವು ಸುಖ ದುಃಖ , ಕಷ್ಟ ನಷ್ಟಗಳಾಟ
ಬೇಸರಿಸದೆ ಸಾಗ ಬೇಕು ಇದು ಜೀವನದಾಟ
ಗಂಡ-ಹೆಂಡತಿ ಅಂದ ಮೇಲೆ ಮಾತು ಬರುತ್ತೆ ಹೋಗುತ್ತಂತೆ
ಅದನೆಲ್ಲ ಕೂಡಿಸಿ ಲೆಕ್ಕ ಇಟ್ಕೋ ಬಾರದಂತೆ
ಚಿಲ್ಲರೆ ಬರುತ್ತೆ ಹೋಗುತ್ತೆ, ಕಂಡಕ್ಟರ್ ಸಾಹೇಬರಂತೆ
ಮುಂದೆ ಮುಂದೆ ಸಾಗಬೇಕು ಬಸ್ ಪ್ರಯಾಣದಂತೆ
ಭಾಗ್ಯಶ್ರೀ ಕೆಕ್ಕಾರ್
೩೦/೦೭/೨೦೨೨