🙏ಗಣಪಗೆ ಶರಣು🙏
ಕರಮುಗಿದು ಬೇಡುವೆನು
ಶಿರಬಾಗಿ ನಮಿಸುವೆನು
ವಿಘ್ನಗಳ ದೂರಗೊಳಿಸು
ಸುಜ್ಞಾನ , ಸದ್ಬುದ್ಧಿ ನೀಡಿ ಕರುಣಿಸು
ವಿಧವಿಧದ ಪುಪ್ಪಗಳನೇರಿಸಿ
ಧೂಪ ದೀಪವ ಬೆಳಗಿಸಿ
ಗರಿಕೆಯನರ್ಪಿಸಿ ಶಿರವನು ಬಾಗುವೆ
ವರವನು ನೀಡು ವಿನಾಯಕ
ಕಷ್ಟಗಳನು ದೂರಗೊಳಿಸಿ
ಇಷ್ಟದಲಿ ಮುನ್ನಡೆಸಿ
ಆರೋಗ್ಯ ನೆಮ್ಮದಿಯ
ಬಾಳಲ್ಲಿ ನೀಡೆಂದು ಬೇಡುವೆನು
ಭಾದ್ರಪದದಾ ಶುಧ್ಧ ಚೌತಿಗೆ
ನಿನಗೆ ವೈಭವ ಪೂಜೆಯು
ತರ ತರದ ಭಕ್ಷಗಳನರ್ಪಿಸಿ
ಮನ್ನಿಸೈ ಪಾಪಗಳಾ ಎಂದು ನಮಿಪರು🙏🙏
✍️✍️ಭಾಗ್ಯಶ್ರೀ ಕೆಕ್ಕಾರ್
೧೭/೦೮/೨೦೨೨