🙏ನಮಿಪೆ ಶ್ರೀಕೃಷ್ಣಾ 🙏
ಹರಿಯೆ ನಿನ್ನ ನಾಮವನ್ನು
ದಿನದಿನವೂ ಪಾಡುವೆನು //ಪ//
ದುರಿತವೆಲ್ಲ ಕಳೆಯ ಬೇಕು
ನಿನ್ನ ಸ್ಮರಿಪ ಬಾಳೇ ಬೇಕು
ನಿನ್ನನೆಂದು ಮರೆಯಲಾರೆ
ಮರೆತು ಮುಂದೆ ಸಾಗಲಾರೆ//೧//
ಹರಿಯ ಸ್ಮರಣೆಯಲ್ಲಿ ಮನವು
ಹರುಷದಿಂದ ನೆನೆವೆ ದಿನವು
ಬದುಕಿನಲಿ ಬರುವುದು ಒಲವು
ನಿನ್ನ ಜೊತೆ ಸಾಗಲು ಬಲವು //೨//
ದುರಿತಗಳನ ದೂರಗೊಳಿಸಿ
ಭವದ ಬಂಧನವನ್ನ ಬಿಡಿಸಿ
ನಿನ್ನ ನಾಮವನ್ನು ಬಿಡದೆ ಭಜಿಪ
ಮನವ ನೀಡೆಮಗೆ ಹರಿಯೇ//೩//
✍️✍️ ಭಾಗ್ಯಶ್ರೀ ಕೆಕ್ಕಾರ್
೨೧/೦೮/೨೦೨೨