ದೀಪಾವಳಿ ಹಬ್ಬದ ಶುಭಾಶಯಗಳು
ಕತ್ತಲೆ ಸರಿಸುತ ದೀಪವ ಬೆಳಗುತ
ಸುಜ್ಞಾನ ಜ್ಯೋತಿಯ ಬೆಳಗೋಣ
ಸಾಲು ಸಾಲು ದೀಪವ ಹೊತ್ತಿಸಿ
ಬೆಳಕಿನ ಕಿರಣಗಳ ಹರಿಸೋಣ
ರೋಗ ರುಜಿನೆಗಳ ಓಡಿಸೋಣ
ಅಂತೆ ಕಂತೆಗಳ ಸರಿಸೋಣ
ಹೊಸ ಚೈತನ್ಯದ ಭಾವವ ಬೆರೆಸುತ
ದೀಪವ ಹಚ್ಚಿ ನಮಿಸೋಣ
ಎಲ್ಲೆಡೆ ಶಾಂತಿ ನೆಮ್ಮದಿ ನೆಲೆಸಲಿ
ಜಗದಲಿ ಅಜ್ಞಾನವು ತೊಲಗಲಿ
ದೇವನ ಕರುಣೆಯು ಬೇಕು
ಸಹಬಾಳ್ವೆಯ ಬದುಕಿರ ಬೇಕು
ಬೆಳಗಿದ ದೀಪದಿ ಕತ್ತಲೆ ಕಳೆಯಲಿ
ಮನೆ ಮನಗಳಲಿ ದೀಪವ ಹೊತ್ತಿಸಿ
ಶಾಂತಿ ನೆಮ್ಮದಿ ನೆಲೆಸಲಿ ಎಂದು
ಕರವನು ಮುಗಿದು ಭಕುತಿಯಲಿ
ನಾವು ನಮಿಸೋಣ🙏🙏
✍️✍️ ಭಾಗ್ಯಶ್ರೀ ಕೆಕ್ಕಾರ
೨೩/೧೦/೨೦೨೨