ನನ್ನಮ್ಮ

❤️  🙏 *ನನ್ನಮ್ಮ* 🙏❤️

ಅಮ್ಮನ ನಂಟು , ಬಿಡಿಸಲಾಗದ ಗಂಟು
ಕರುಳ ಬಳ್ಳಿಯ  ಗುರುತುಂಟು
ಹೊತ್ತು  ಹೆತ್ತು   ಸಾಕಿ ಸಲಹಿದಳು
ಪ್ರೀತಿ , ಮಮತೆಯ ನೀಡಿದವಳು

ಮನೆಯಲಿ ಓಡಾಡುತ ನಡೆವಳು
ಕಾಯಕದಲ್ಲಿಯೆ ದಿನದೂಡುವಳು
ಸಂತಸದಿಂದಲೆ ಕಷ್ಟವ ಕಳೆವಳು
ಯಾರಿಗೂ ಮನ ನೋಯಿಸದವಳು

ಅಕ್ಕಂದಿರ ಜೊತೆಯಲೆ  ಇರುತಿಹಳು
ತನುವಿನ  ನೋವನು ಮರೆಯುವಳು
ಎಲ್ಲರನು ಪ್ರೀತಿಯಲೆ  ಕಾಣುವವಳು
ಸಿಡುಕದು ಬರಲು ನುಡಿದೇ ಬಿಡುವಳು

ದೇವನ  ಪೂಜೆಯ ನಿತ್ಯವು ಗೈವಳು
ಬಾಣಸ ದಲ್ಲಿಯೆ ದಿನವನು ಕಳೆವಳು
ಕರೆಯನು ಮಾಡಲು ಮರೆಯದೆ ನುಡಿವಳು
ಸೂಟಿ ಇದ್ದಾಗ  ಬನ್ನಿರಿ  ಎನುವಳು

ಅವಳೆ ನಮ್ಮ ಹೆತ್ತವಳು
ಬಡತನದಲಿ ಬೆಳೆಸಿದಳು
ಬದುಕಿನ ಪಾಠ ಕಲಿಸಿದಳು
ಅವಳ ಋಣ ಹೇಗೆ ತೀರಿಸಲಮ್ಮ!?

ಅಮ್ಮನ ನೆನಪು ಮನದಲಿ ಉಂಟು
ಅವಳ ಅಪ್ಪುಗೆ ಹೃದಯದಲುಂಟು
ಅವಳ‌ ಮಾತು ಕಿವಿಯಲಿ ಉಂಟು
ಅವಳೆ ನಮ್ಮ ಬದುಕಿನ ನಂಟು

✍️✍️ ಭಾಗ್ಯಶ್ರೀ ಕೆಕ್ಕಾರ
( ಭಾಗೀ ಹೆಗಡೆ ಕಲ್ಲಳ್ಳಿ )
೨೨/೧೨/೨೦೨೨








Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)