ಅರಿತು ನಡೆಯುವ ಜೀವನ
ಹಳೆಯ ವರುಷದ ನೆನಪಿದೆ
ಮನದಲಿ ನೆನಪು ಮೂಡಿದೆ
ಕಹಿಯ ಭಾವನೆ ಮರೆತಿದೆ
ಸಿಹಿಯ ಹೂರಣ ತುಂಬಿದೆ
ಕಹಿಯ ನೆನಪು ಪಾಠ ಕಲಿಸಿ
ಪಾಠದಲಿ ಅನುಭವವ ಬೆರೆಸಿ
ಹೊಂದಿಕೊಳುವ ಜೀವನ
ಅರಿತು ನಡೆಯಲು ಪಾವನ
ಮನದ ನೋವನು ಮರೆಯುವ
ಸ್ನೇಹ ಪ್ರೀತಿಯ ಹಂಚುವ
ಹಳೆಯ ವರುಷದ ನೆನಪ ಬುತ್ತಿಯ
ಹೊತ್ತು ಮುಂದಕೆ ಸಾಗುವ
ಹೊಸ ವರುಷದ ಹರುಷವಿರಲಿ
ಬಾಳ ಪಯಣ ಸಾಗುತಲಿರಲಿ
ಬರುವುದನೆಲ್ಲಾ ಎದುರಿಸುತಲಿ
ದೇವನೊಲುಮೆ ಬಾಳಲಿ ಇರಲಿ🙏🙏
✍️✍️ ಭಾಗ್ಯಶ್ರೀ ಕೆಕ್ಕಾರ
೭/೧೨/೨೦೨೨