ಸಂಪಿಗೆ ಹಣ್ಣು

ಪ್ರಕೃತಿಯ ಜೊತೆಯಲಿ 
ನಲಿವೆವು ಮುದದಲಿ
ಎಲ್ಲರ ಜೊತೆ ಸೇರುತಲಿ
ಬೇಸಿಗೆ ಬಂತೆಂದರೆ ಸಾಕು 
ಶಾಲೆಗೆ ರಜೆ ಬರಲೇ ಬೇಕು

 ಒಲವಿನ ಗೆಳತಿಯರ ಜೊತೆಯಲಿ 
 ಬೆಟ್ಟದ ದಾರಿಯಲಿ ಸಾಗುತಲಿ
 ಮುಳ್ಳನು ಚುಚ್ಚಿಸಿ ಕೊಳ್ಳುತಲಿ
 ಸಂಪಿಗೆ ಮರವನು ಏರುತಲಿ

ಮರದಲಿ ಹಣ್ಣನು ಕಂಡೊಡನೆ
ಮರ ಏರುವದು ಮಕ್ಕಳ ದಂಡು
ದೇಹದ ಪರಿವೆಯ ಅರಿವಿಲ್ಲ
ಕಾಲಿಗೆ ಮುಳ್ಳದು ತಾಗಲ್ಲ
ನೋವಿನ ಭಯವೆ ನಮಗಿಲ್ಲ 

ಏರಿದ ಮರದಲಿ ಹಣ್ಣನು ಕೀಳುತ
ಸಂತಸದಿಂದಲಿ ನಲಿಯುವೆವು
ಎಲ್ಲರ ಜೊತೆಯಲಿ ಹಣ್ಣನು ಹಂಚುತ
ಸಿಹಿ ಸಿಹಿ ಹಣ್ಣಿನ ಸವಿಯನು ಮೆಲ್ಲುವೆವು

ಬಾಲ್ಯದ ನೆನಪಿನ ಬುತ್ತಿಯ ಬಿಚ್ಚಿದೆ 
ಕಳೆದ ಬಾಲ್ಯವ ಖುಷಿಯಲಿ  ನೆನೆದೆ
ಇಂದಿನ ಮಕ್ಕಳ ಬಾಲ್ಯವು ಕರೆವಾಣಿಯಲೆ 
ಹಣ್ಣಿನ ಚಿತ್ರವ ಅದರಲೆ ನೋಡುತ 
ದಿನವನು  ಅದರಲೆ ಕಳೆಯುವರು

✍️✍️ ಭಾಗ್ಯಶ್ರೀ ಕೆಕ್ಕಾರ
  ( ಭಾಗೀ ಹೆಗಡೆ ಕಲ್ಲಳ್ಳಿ)
ಮೊನ್ನೆ ಗೀಚಿದ್ದು , ಇವತ್ತು ಪೋಸ್ಟ್ ಹಾಕಿದ್ದು 













Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)