ಖೋಖೋ

 ನಂಗೂ ಒಂದು ಹಳೆ ಕಥೆ  ನೆನಪಾತು , (ಇಪ್ಪತ್ತು ವರ್ಷಗಳ ಹಿಂದಿನ ಕಥೆ)ನಮ್ಮವರು ಆಗ  (ಬಿಣಗಾ ಕಾಸ್ಟಿಕ್ ಸೋಡಾ ಕಂಪೆನಿಯಲ್ಲಿ ಕೆಲಸ ಮಾಡ್ತಿದ್ರು)  ಬೆಳಿಗ್ಗೆ ಆರು ಗಂಟೆಗೆ ಕೆಲಸಕ್ಕೆ ಹೋಗಿ ಮೂರು ಗಂಟೆಗೆ ಬತ್ತಿದ್ರು , (ಬೆಳಗಿನ ಶಿಪ್ಟ ಆಗಿತ್ತು) ಮನೆಗೆ ಬಂದ ಮೇಲೆ ಊಟಾ ಮಾಡಿ ಗಡದ್ದ ನಿದ್ರೆ ಮಾಡ್ತಿದ್ರು. ...ನಾನೂ ಮಲಗಿ ಬಿಡ್ತಿದ್ದೆ...ಒಂದಿನ ಊಟ ಮಾಡಿ ಮಲಗ್ರೆ ಎಚ್ರೇ ಆಜಿಲ್ಲೆ, ಸಂಜೆ ಏಳು ಗಂಟೆ ಹೊತ್ತಿಗೆ ಎಚ್ರಾತು ,ನಾ ಎದ್ದಕಂಡು ಚಾ ಮಾಡ್ದೆ, ಕೆಲಸಕ್ಕೆ ಹೋಗಿ ಬಂದು ಊಟ ಮಾಡಿ ಮಲಗಿದ್ದು ಎಲ್ಲಾ ಮರ್ತೊಜು , ಮತ್ತೆ ಬೆಳಗಾತು ಹೇಳಿ ಚಾ ತಿಂಡಿ ತಿನ್ನಕಂಡು ಬೆಳಿಗ್ಗೆ ಹೇಳಿ ತೆಳಕಂಡು, ...ಮತ್ತೆ ಕೆಲಸಕ್ಕೆ ಹೋಪ ತಯಾರಿ ನಡೆದಿತ್ತು ,ಸರಿ ನೆನಪು ಮಾಡ್ಕಳಿ ... ಮಧ್ಯಾಹ್ನ ಊಟ ಮಾಡ್ಕ ಮಲಗಿದ್ದಲ್ಲದ ಅಂದೆ... 😁😁 ತಡಿ ... ನೆನಪು ಮಾಡ್ತೆ  ...... ಮಧ್ಯಾಹ್ನ ಊಟ ಮಾಡಿ ಮಲಗಿದ್ದಾಗಿತ್ತು ಹೇಳಿ ನೆನಪಾಗಿ....ನೆಗೆ ತಡ್ಯಲಾಜಿಲ್ಲೆ.....
ಈಗ ಮತ್ತೆ ನೆನಪಾತು...ನೆಗೆ ಬಂದು ಬಂದು ಇಟ್ಟೋತು...ಮಕ್ಕಳು ಎಂತಾ ಒಬ್ಬನೆ ನೆಗೆಯಾಡ್ತೆ...... ಸರಿ ಇದ್ಯಲೆ ಅಮ್ಮಾ.....ಎಂದ... ಮಕ್ಕಳ ಹತ್ರ ಹೇಳದೆ..... ನೆನಪು ಮಾಡಕಂಡೆ .....😁😁😁😁..
ನಂಗ್ ಬಂದಾಂಗ್ ಗೀಚಿದ್ದೆ... ತಪ್ಪಿದ್ದರೆ ಹೊಟ್ಟೆಗೆ ಹಾಕ್ಯಳಿ..

೧೩/೦೩/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)