ಜೇಡರ ಬಲೆ
ಮಾಲೆಯನು ಮಾಡಿಹುದು
ಚಂದದಲಿ ನೋಡಿ
ಮಾಲೆಯನು ಕಟ್ಟುವ
ಕಸುಬ ಕಲಿತಿಹುದು ನೋಡಿ
ದಿನದಿನವು ಕಟ್ಟುವದದು ಮಾಲೆಯಾ
ತನಗೆ ಮಾಲೆ ಕಟ್ಟುವ ಕಸುಬು
ದೇವನಿತ್ತ ವರವಹುದು ನೋಡಿ
ಪ್ರತಿನಿತ್ಯ ಮಾಲೆ ತೆಗೆದರೂ ಮತ್ತೆ
ಕಟ್ಟುವುದು ಹೊಸ ಹುರುಪಿನಿಂದ
ಮಾನವಗೆ ತಿಳಿದಿಲ್ಲ ಈ ತರದ ಕಸುಬು
ಇದು ನನ್ನ ಕಾಯಕವು ಕಟ್ಟುವುದ
ಬಿಡಲಾರೆ ಎಂದೆನುತ ಮತ್ತೆ
ಮಾಲೆ ಕಟ್ಟುತಲಿಹುದು ನೋಡಿ.
ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
( ಮನೆಯಲ್ಲಿ ಜೇಡರ ಬಲೆ ತೆಗೆವ ಸಮಯದಲಿ ಅನಿಸಿದ ಭಾವ..)