ಹೆಣ್ಣು 🙏🙏

#ಹೆಣ್ಣು#

ಬದುಕಿನ ಮೂಲ ಹೆಣ್ಣು
ಮನೆಯಲಿ ನಿತ್ಯ ದುಡಿವಳು ಹೆಣ್ಣು
ಮನೆಯ ದುಡಿಮೆ ಕಾಣದಿರುವ ಕಣ್ಣು
ಸಕಲರ ಜೊತೆ ಬೆರೆಯುವವಳು ಹೆಣ್ಣು 

ಅಮ್ಮನಾಗಿ ಮಮತೆಯಿಂದ ಸಲಹುವವಳು
ಮಡದಿಯಾಗಿ ಎಲ್ಲವನ್ನೂ ಸಹಿಸುವವಳು
ಸಹೋದರಿಯಾಗಿ ಎಲ್ಲರನ್ನೂ ಸರಿದೂಗಿಸುವವಳು
ಮಗಳಾಗಿ ಎಲ್ಲರೊಂದಿಗೂ ಬೆರೆಯುವವಳು

ಹೆಣ್ಣು ಹೆಣ್ಣೆಂದು ಹೀಳುಗಳಿಯದಿರಿ
ಅವಳೆ ಎಲ್ಲರನ್ನ ಸಾಕಿ ಸಲಹುವವಳು
ಮನೆತನದ ನೊಗ ಹಿಡಿದಿರುವವಳು
ಜೋಪಾನವಾಗಿರಿಸಿ ಅನುದಿನವು ಅವಳ 

ಹುಟ್ಟಿದಾ ಮನೆಯಲ್ಲಿ ಆಗುವಳು ಸಾರಥಿ
ಅವಳಿಲ್ಲದಿದ್ದರೆ ಆಗುವುದೆ‌ ಆರತಿ
ಮತ್ತೆ ಪೋದರೆ ತೊರೆದು ಮನೆಯನ್ನೇ ಆ ರತಿ 
ಬೆಳಗುವಳು ಇನ್ನೊಂದು ಮನೆಯ ಬಹು ಕೀರುತಿ 

ಭಾಗ್ಯಶ್ರೀ ಕೆಕ್ಕಾರ
(ಭಾಗಿ ಹೆಗಡೆ ಕಲ್ಲಳ್ಳಿ)
೨೫/೦೧/೨೨

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)