ಬೀಸುವ ಗಾಳಿಗೆ ಬೇಧ ಭಾವವಿಲ್ಲ
ಸುಗಂಧ ದುರ್ಗಂಧಗಳೆಂದು
ಬೇಧವೆಣಿಸದೆ ಎಲ್ಲವನ್ನೂ
ಹೊತ್ತೊಯ್ಯುತದೆ ಗಾಳಿಯಲ್ಲಿ
ಗುಡಿಸಲೋ,ಅರಮನೆಯೋ ಎಂಬ ಬೇಧ ಭಾವವಿಲ್ಲ
ಬೆಳಕ ನೀಡುವ ಸೂರ್ಯನಿಗೆ
ಎಲ್ಲೆಡೆಯೂ ಪಸರಿಸುವನು ⛅ ತನ್ನ ಕಿರಣಗಳನ್ನ
ಬಡವನೊ,ಬಲ್ಲಿದನೊ ಎಂಬ ಬೇಧ ಭಾವವಿಲ್ಲ
ಸುರಿವ ವರುಣನಿಗೆ,ಬಂತೆಂದರೆ ಸಾಕು
ಎಲ್ಲರನ್ನೂ ತೋಯಿಸುವನು
ಧರಣಿಗೆ ಮೇಲು -ಕೀಳು ,ಬಡಲ -ಬಲ್ಲಿದನೆಂಬ
ಭೇದ ಭಾವವಿಲ್ಲ, ಎಲ್ಲರನ್ನೂ
ಹೊತ್ತು ನಿಂತಿದೆ ತನ್ನ ಮಡಿಲಿನಲಿ
ಉರಿಯುವ ದೀಪಕ್ಕೆ ಬೇಧಭಾವವಿಲ್ಲ
ಬಡವ,ಬಲ್ಲಿದರೆಂದು,ಸದಾ ಸುರುವಲೇ
ಬೇಕು ತೈಲವನ್ನ ಮಾತ್ರ
ಒಳ್ಳೆಯವರೊ,ಕೆಟ್ಟವರೊ ಎಂಬ ಬೇಧ ಭಾವವಿಲ್ಲ
ಕಣ್ಣಿಗೆ ಕಾಣಿಸದ ಆ ಭಗವಂತನಿಗೆ,
ಎಲ್ಲರೂ ಒಂದೆ ಅವನ ದೃಷ್ಟಿಯಲ್ಲಿ.
ಮತ್ಯಾಕೆ ನಮಗಿನ್ನು ಒಲ್ಲದ ಚಿಂತೆ
ನಮ್ಮ ನಾವು ಅರಿತು ಬಾಳಿದರೆ ಸಾಕಲ್ಲವೇ!!??
ಕರಮುಗಿದು ಬೇಡುವೆನು
ನಿನ್ನಯ ಚರಣಗಳಲಿ
ವಿನಾಯಕ ಲಂಬೋದರ
ಸತತ ಎಮ್ಮನು ಕಾಯೋ//ಪ//
ನಮ್ಮೆಲ್ಲರ ಬಾಳಿನ ಕಷ್ಟಗಳ ನೀಗಿಸು
ಸದಾ ಬಾಳಿನಲಿ ಆನಂದವ ಪಾಲಿಸು
ಹರಸು ಎಮ್ಮನು ಸತತ ವಿನಾಯಕನೆ//೧//
ದುಃಖ ದುಮ್ಮಾನ ಬಳಿಯಲಿ ಸುಳಿಯದಂತೆ
ದ್ವೇಷ ,ಅಸೂಯೇ ಮನದೊಳಗೆ ಬರದಂತೆ
ಸತತ ಎಮ್ಮನು ಕಾಯೋ ವಿನಾಯಕನೆ//೨//
ಆಶ-ಪಾಶಗಳ ಹಿಡಿತದಲಿ ಇರಿಸು
ನೇಮ ನಿಷ್ಟೆಗಳ ಬಾಳಿನಲಿ ನಡೆಸು
ಸದ್ಬುದ್ದಿ ಸೌಭಾಗ್ಯ ಕೊಟ್ಟು ಕಾಪಾಡು
ಸತತ ಎಮ್ಮನು ಕಾಯೋ ವಿನಾಯಕನೆ//೩//
ಸರ್ವರಿಗೂ ಸದಾ ಒಳಿತನ್ನು ನೀಡು ಪಾಲಿಸು
ಬಾಳಿನಲಿ ನೆಮ್ಮದಿ ಇತ್ತು ಕಾಪಾಡು
ಸತತ ಎಮ್ಮನು ಕಾಯೋ
ವಿನಾಯಕನೆ ವಿಘ್ನ ನಿವಾರಕನೆ
ಗಂಧ ಚಂದನ ಹಚ್ಚುವೆನು,ಕೆಂಪು ದಳದ ಪುಷ್ಪಗಳ ಪಾದಗಳಿಗೆ ಏರಿಸುವೆನು, ತುಪ್ಪದ ದೀಪ ಹಚ್ಚಿ -
ಕರ ಮುಗಿದು ಬೇಡುವೆನು,ಎಲ್ಲರನ್ನೂ ವಿಘ್ನಗಳಿಂದ
ದೂರಗೊಳಿಸು ವಿನಾಯಕ.