ಎಲ್ಲ ಕಲಿತಿರಬೇಕು
ಎಲ್ಲವನು ಕಲಿತಿರಬೇಕು ಬದುಕಿನಲ್ಲಿ
ಸಮಯ ಹೇಗೆ ಬರುವುದೆಂದು ತಿಳಿಯದಿಲ್ಲಿ!
ಎಲ್ಲ ತಿಳಿದಿಹೆನೆಂಬ ಮದವು ಬಾರದಿರಲಿ
ಅವನ ಕರುಣೆಯಲ್ಲೆ ಬದುಕು ಸಾಗುತಿರಲಿ
ನಾನು ನನ್ನದು ಎನ್ನುವ ಅಹಂ ಬಾರದಿರಲಿ
ದೇವನ ಕೊಡುಗೆ ಎನ್ನುವುದು ತಿಳಿದಿರಲಿ
ಅವನ ಸ್ಮರಣೆಯದು ಸದಾ ಮನದಲ್ಲಿರಲಿ
ಮನವದು ದೇವನಿಗೆ ಸದಾ ಶರಣಾಗುತಿರಲಿ
ತಪ್ಪುಗಳು ನಡೆದಾಗ ನಡೆಸಿದವನು ಅವನೆ
ತಿದ್ದಿಕೊಳ್ಳಲು ಮನವ ನೀಡುವವನು ಅವನೆ
ತಿದ್ದಿ ತಿದ್ದಿ ಸರಿದಾರಿಯ ತೋರುವವನು ಅವನೆ
ಸರಿದಾರಿಯಲ್ಲೇ ನಡೆಸಿ ಹಿಗ್ಗದಿಹ ಮನವನು
ನೀಡೆಂದು ಬೇಡುವೆನು ಅವನನೆ🙏🙏
✍️✍️ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೧೨/೦೪/೨೦೨೩