ಸಮಚಿತ್ತದ ಬಾಳು
*ಸಮಚಿತ್ತದಲಿ ಬಾಳು*🌺🌺
ಹೊಗಳಿಕೆ ಕುಂಬಳಕಾಯಂತೆ ಹಿಗ್ಗದೆ
ತೆಗಳಿಕೆಗೆ ಹಾಗಲಕಾಯಂತೆ ಕುಗ್ಗದೆ
ಬದುಕಿನ ಟೀಕೆ ಟಿಪ್ಪಣಿಗಳಿಗೆ ಜಗ್ಗದೆ
ಸಮಚಿತ್ತ, ಸಂಯಮದಲಿ ತಲೆಕೆಡಿಸಿಕೊಳ್ಳದೆ
ಬಾಳಿ ಬದುಕುವುದು ಒಂದು ಸುಂದರ ಕಲೆ
ಅದನರಿತು ನಡೆವ ಮಾನವನಿಗೊಂದು ಬೆಲೆ
✍️✍️ ಭಾಗ್ಯಶ್ರೀ ಕೆಕ್ಕಾರ
(ಭಾಗೀ ಹೆಗಡೆ ಕಲ್ಲಳ್ಳಿ)
೧೩/೦೪/೨೦೨೩