ಬಾಲ್ಯದ ಸಿಹಿ ಹೂರಣ
ಬಾ ಎಂದರೆ ಬರುವುದಿಲ್ಲ ,ಬೇಸರವು ತರವಲ್ಲ
ಮನದ ಮೂಲೆಯಲ್ಲಿ ಅಡಗಿ ಕೂತಿದೆಯಲ್ಲ
ಸವಿನೆನಪು ಆಗಾಗ ಮರುಕಳಿಸುತಿದೆಯಲ್ಲ
ನೆನೆ ನೆನೆದು ಸಂತಸ ಪಡುತಿರಬಹುದಲ್ಲ !
ಬಂದಿಹುದ ಅನುಭವಿಸಿ ಸಾಗಲೇ ಬೇಕಲ್ಲ
ಇರುವುದರಲೆ ಮನವನು ಹಿಗ್ಗಿಸ ಬಹುದಲ್ಲ!
ಸುಂದರವಾದ ಬಾಲ್ಯದ ನೆನಪು ಸಹಜವದು
ಮತ್ತೆಲ್ಲಿ ಬರುವುದು ಕಳೆದಿರುವ ದಿನಗಳದು
ಊರಿನ ಗುಡ್ಡದ ನೆನಪು ಅಚ್ಚೊತ್ತಿ ಹುದು
ತರತರದ ಹಣ್ಣುಗಳು ಕಣ್ಣಮುಂದಿಹುದು
ನೆನಪು ಮೂಡಿ ಮನವು ಸಿಹಿಯಾಗುತಿಹುದು!
ಓ ಬಾಲ್ಯವೇ ನೀನೆಷ್ಟು ಸುಂದರ ಸುಮಧುರ
ಅಕ್ಷರದಲಿ ಬರೆದು ಅದನು ತೋರಲಾರೆ
ಮಾತಿನಲಿ ನುಡಿದು ನಾನು ಹೇಳಲಾರೆ
ಹೃದಯದ ಗೂಡಲ್ಲಿ ಬಚ್ಚಿಟ್ಟ ಭಾವನೆಗಳ
ತೆಗೆದು ಅದನು ತೋರಲಾರೆ...
ಓ ಬಾಲ್ಯವೇ ಸಿಹಿ ಸಿಹಿಯ ಹೂರಣವೆ
ನೆನಪಿನ ದೋಣಿಯನೇರಿ ಬಾಲ್ಯಕ್ಕೆ
ಮತ್ತೊಮ್ಮೆ ಸಾಗುವೆ......😁😁
✍️✍️ಭಾಗ್ಯಶ್ರೀ ಕೆಕ್ಕಾರ
( ಭಾಗೀ ಹೆಗಡೆ ಕಲ್ಲಳ್ಳಿ)
೧೦/೦೪/೨೦೨೩