ಸುಂದರ ಪಯಣವ ಅರಿತವರಿಲ್ಲ 🙏🙏

*‌ಸುಂದರ ಪಯಣವ ಅರಿತವರಿಲ್ಲ*🙏🙏🙏🙏🙏🙏🙏🙏🙏🙏


ಬದುಕಿನ ಸುಂದರ ಪಯಣವ ಅರಿತವರಿಲ್ಲ
ಎಲ್ಲವನು ಅರಿತಂತೆ ಮೆರೆವೆವು ನಾವೆಲ್ಲ!
ಆಸೆಗಳ ಮೂಟೆಯನು  ಕಟ್ಟಿರುವೆಯಲ್ಲ!?
ಅವನ ನಿಯಮದಂತೆ  ಬಾಳು ಸಾಗುವುದಲ್ಲ 

ಮೂಟೆಗಳ ಒಮ್ಮೆ ಬಿಚ್ಚಿ ನೋಡಬೇಕಲ್ಲ
ತುಂಬಿದೆ ಅದರಲಿ ನೋವು -ನಲಿವುಗಳೆಲ್ಲ
ಸಾಗುವ ದಾರಿಯಲಿ ಕಲ್ಲು -ಮುಳ್ಳುಗಳಿದೆ
ಕಾಲಿಗೆ ತಗಲಿಸಿಕೊಳ್ಳದೆ ಬಾಳು ಸಾಗಬೇಕಿದೆ


ಸಂತಸದಲಿ ಕಮಲವರಳುವ ತೆರದಿ
ಬವಣೆಗಳ ಮರೆತು ನಡೆಯಬೇಕಿದೆ
ಕೆಸರಲ್ಲಿ ಅರಳಿದರೂ ನಗುವ ಬೀರುವಂತೆ 
ದೇವನ ಪಾದವ ಏರಿ ನಗುತಲಿರುವಂತೆ



✍️✍️ ಭಾಗ್ಯಶ್ರೀ ಕೆಕ್ಕಾರ
( ಭಾಗೀ ಹೆಗಡೆ ಕಲ್ಲಳ್ಳಿ)
೨೯/೦೬/೨೦೨೩

Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)