ಪ್ಯಾಟೆ ಕೆಲ್ಸ ಮುಗ್ಸಿಕ್ ಬಪ್ಪನ


ಮನೆಲಿನ್ನೂ ಕೆಲ್ಸಾಜಿಲ್ಲೆ
ಕೊಟ್ಗೆ ಕಂಬ್ಳ ಮಾಡವಿಲ್ಲೆ
ತೆರ್ಕು ತೋಟಕ್ ಹಾಕಾಜಿಲ್ಲೆ
ಕಟ್ಗೆ ಹೊರೆ ಹೊತ್ತಾಜಿಲ್ಲೆ

ಆಳ್ಗ ಯಾರು ಸಿಕ್ತವಿಲ್ಲೆ
ಪೋನ್ ಮಾಡ್ರೆ ತೆಗಿತ್ವಿಲ್ಲೆ
ಮಳೆಗಾಲ ಬಂದೋತು
ಕೆಲ್ಸ ಎಲ್ಲಾ ನಿಂತೋತು 

ಹಲ್ಸನ  ಕಾಯಿ ಬೆಳದ್ದಿಲ್ಲೆ
ಹಪ್ಳ ಮಾಡಲ ಕಾಯಿಲ್ಲೆ
ಮಾವ್ನಕಾಯಿ ಬಂಜಿಲ್ಲೆ
ಕೊಸ್ಗಾಯ ಹಾಕ ಕೆಲಸಿಲ್ಲೆ

ಗೇರ್ಬೆಳೆ  ಚೊಲೋ ಇದ್ದು
ಬಿಸ್ಲಲ್ಲಿ ಗೇರ್ಬಿಜ ಒಣ್ಗಸಾತು
ಡಬ್ಬಿ ತುಂಬಿ ಅಟ್ಟಕ್ ಇಟ್ಟಾತು
ಈ ಸಲದ ಮಳ್ಗಾಲಕ್ಕೆ ಸಾಕಾಗತು

ಮಲೆನಾಡಿನ  ಮಳೆಗಾಲ  ಅಂದ್ರೇ  ಹಿಂಗೇ..
ತೆರ್ಪಿಲ್ಲದೆ ಹಗ್ಲು -ರಾತ್ರೆ  ಹೊಯ್ತಾ ಇರ್ತು...
TSS ಲಿ ಮಳ್ಗಾಲದ ಕಂಬ್ಳಿ ಬಂಜನ
ಪ್ಯಾಟೆಕೆಲ್ಸಾದ್ರೂ ಮುಗ್ಸಿಕ್ ಬಪ್ಪನ ...

ಭಾಗ್ಯಶ್ರೀ ಕೆಕ್ಕಾರ
೨/೬/೨೦೨೩


 ✍️✍️ಭಾಗ್ಯಶ್ರೀ ಕೆಕ್ಕಾರ
೨/೦೬/೨೦೨೩






Popular posts from this blog

ನಗು ನಗುತಲಿರು ಮಲ್ಲಿಗೆಯಂತೆ

ಮೌನ

ಆಸೆ , ಪರೀಕ್ಷೆ ( ಚುಟುಕು)